ರೈಲಿನಡಿಯಲ್ಲಿ ನಿಂತಿದ್ದ 6 ಕಾರ್ಮಿಕರು ಸಾವು – ಎಂಜಿನ್​ ಇಲ್ಲದೇ ಚಲಿಸಿದ ರೈಲು..!

 ಒಡಿಶಾದ ಜಜ್ಪುರ್​ ರೈಲ್ವೆ ನಿಲ್ದಾಣದಲ್ಲಿ ಗೂಡ್ಸ್​ ರೈಲಿನ ಅಡಿಗೆ ಸಿಲುಕಿ ಆರು ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ.
ಮಳೆಯ ಹಿನ್ನೆಲೆಯಲ್ಲಿ ಕಾರ್ಮಿಕರು ಗೂಡ್ಸ್​ ರೈಲಿನ ಕೆಳಗಡೆ ನಿಂತಿದ್ದರು. ನಾಲ್ವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟರೆ ಉಳಿದಿಬ್ಬರು ಆಸ್ಪತ್ರೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಈ ರೈಲಿಗೆ ಇಂಜಿನ್​ ಜೋಡಣೆ ಆಗಿರಲಿಲ್ಲ. ಆದರೂ ರೈಲಿನ ಬೋಗಿಗಳು ಇದಕಿದ್ದಂತೆ ಚಲಿಸಲು ಶುರು ಮಾಡಿದ್ದರಿಂದ ದುರಂತ ಸಂಭವಿಸಿದೆ.