ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಪುನಶ್ವೇತನಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ 89,047 ಕೋಟಿ ರೂಪಾಯಿ ನೀಡುವುದಕ್ಕೆ ನಿರ್ಧರಿಸಿದೆ.
ಇವತ್ತು ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಈ ಮೂಲಕ ಬಿಎಸ್ಎನ್ಎಲ್ನ ಒಟ್ಟು ಬಂಡವಾಳ ಪ್ರಮಾಣ 1.5 ಲಕ್ಷ ಕೋಟಿ ರೂಪಾಯಿಗಳಿಂದ 2 ಲಕ್ಷದ 10 ಸಾವಿರ ಕೋಟಿ ರೂಪಾಯಿ ಏರಿಕೆ ಆಗಲಿದೆ.
ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಬಿಎಸ್ಎನ್ಎಲ್ ಮತ್ತೆ ಟೆಲಿಕಾಂ ಕ್ಷೇತ್ರದಲ್ಲಿ ಖಾಸಗಿ ಕಂಪನಿಗಳಾದ ರಿಲಯನ್ಸ್ ಮತ್ತು ಏರ್ಟೆಲ್ಗೆ ಸ್ಪರ್ಧೆ ನೀಡುವ ಶಕ್ತಿ ಹೊಂದಲಿದೆ.
4ಜಿ ಮತ್ತು 5ಜಿ ವಲಯದಲ್ಲಿ ಬಿಎಸ್ಎನ್ಎಲ್ ಇನ್ನಷ್ಟು ಬಲಗೊಳ್ಳಲಿದೆ.
2019ರಲ್ಲಿ ಬಿಎಸ್ಎನ್ಎಲ್ಗೆ ಸರ್ಕಾರ 69 ಸಾವಿರ ಕೋಟಿ ರೂಪಾಯಿ ನೀಡಿತ್ತು. 2022ರಲ್ಲಿ ಬಿಎಸ್ಎನ್ಎಲ್ಗೆ 1.64 ಲಕ್ಷ ಕೋಟಿ ರೂಪಾಯಿ ಮೊತ್ತದ ಪುನಶ್ಚೇತನ ನೆರವಿಗೆ ಒಪ್ಪಿಗೆ ನೀಡಿತ್ತು.
ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ ಈ ಹಣಕಾಸು ನೆರವುಗಳಿಂದ ಬಿಎಸ್ಎನ್ಎಲ್ ಕಳೆದ ಆರ್ಥಿಕ ವರ್ಷದಿಂದ ಲಾಭದಾಯಕ ಸಂಸ್ಥೆಯಾಗಿ ಹೊರಹೊಮ್ಮಿದೆ. ಬಿಎಸ್ಎನ್ಎಲ್ ಮೇಲಿದ್ದ ಸಾಲದ ಹೊರೆ 22,289 ಕೋಟಿ ರೂಪಾಯಿಗೆ ಇಳಿದಿದೆ.
ಬಿಎಸ್ಎನ್ಎಲ್ ಮಾಹಿತಿ ಪ್ರಕಾರ 2020-21ರ ಆರ್ಥಿಕ ವರ್ಷದಲ್ಲಿ 18, 595 ಕೋಟಿ ರೂಪಾಯಿ ಆದಾಯ ಗಳಿಸಿತ್ತು. ಜೊತೆಗೆ 1208.35 ಲಕ್ಷ ಚಂದಾದಾರಿದ್ದಾರೆ.
ADVERTISEMENT
ADVERTISEMENT