10 ಗ್ರಾಂ ಚಿನ್ನಕ್ಕೆ 60 ಸಾವಿರ ರೂಪಾಯಿ ಗಡಿ ದಾಟಿದ್ದರಿಂದ ಆಘಾತಗೊಂಡಿದ್ದ ಆಭರಣ ಖರೀದಿದಾರರಿಗೆ ಸಮಾಧಾನಕರ ಸುದ್ದಿ.
ಚಿನ್ನದ ಬೆಲೆ ಇವತ್ತು ಬರೋಬ್ಬರೀ 1,100 ರೂಪಾಯಿಯಷ್ಟು ಕುಸಿತ ಕಂಡಿದೆ. ಇದರೊಂದಿಗೆ ಸತತ ಎರಡನೇ ದಿನವೂ ಚಿನ್ನದ ಬೆಲೆ ಕುಸಿತ ಕಂಡಿದೆ.
ನಿನ್ನೆ 10 ಗ್ರಾಂ ಚಿನ್ನದ ಬೆಲೆ 850 ರೂಪಾಯಿಯಷ್ಟು ಕುಸಿತ ಕಂಡಿತ್ತು. ಇವತ್ತು ಮತ್ತೆ 1,100 ರೂಪಾಯಿ ಕುಸಿತ ಕಂಡಿದೆ.
ಅಂದರೆ ಕೇವಲ ಎರಡು ದಿನದ ಅಂತರದಲ್ಲಿ 10 ಗ್ರಾಂ ಚಿನ್ನಕ್ಕೆ 2,300 ರೂಪಾಯಿಯಷ್ಟು ಕಡಿಮೆ ಆಗಿದೆ. ಇವತ್ತು 10 ಗ್ರಾಂ ಚಿನ್ನದ ಬೆಲೆ 58,840 ರೂಪಾಯಿಗೆ ಇಳಿದಿದೆ.