ಗೋವಾದಲ್ಲಿ ಕಾಂಗ್ರೆಸ್ನ 10 ಶಾಸಕರು ಬಿಜೆಪಿ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ. ರಾಷ್ಟçಪತಿ ಚುನಾವಣೆಯಲ್ಲಿ ಈ ಹತ್ತು ಶಾಸಕರು ಎನ್ಡಿಎ ಅಭ್ಯರ್ಥಿ ಪರ ಅಡ್ಡಮತದಾನ ಮಾಡುವ ನಿರೀಕ್ಷೆ ಇದೆ.
ಸದ್ಯ ಗೋವಾ ವಿಧಾನಸಭೆಯಲ್ಲಿ ಕಾಂಗ್ರೆಸ್ 11 ಶಾಸಕರನ್ನು ಹೊಂದಿದೆ. ಬಿಜೆಪಿ 20 ಶಾಸಕರನ್ನು ಹೊಂದಿದೆ. ಆಮ್ ಆದ್ಮಿ ಪಾರ್ಟಿ ಇಬ್ಬರು, ಎಂಜಿಪಿ ಇಬ್ಬರು, ಐವರು ಸ್ವತಂತ್ರ ಶಾಸಕರಿದ್ದಾರೆ.
ಈಗಾಗಲೇ ಎಂಜಿಪಿ ಮತ್ತು ಮೂವರು ಸ್ವತಂತ್ರ ಶಾಸಕರು ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ.
ಆದರೆ ಏಕಕಾಲಕ್ಕೆ 10 ಮಂದಿ ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಕಡಿಮೆ ಇದೆ. ಆದರೆ ಈ ಹತ್ತು ಶಾಸಕರಿಗೆ ರಾಷ್ಟçಪತಿ ಚುನಾವಣೆಯಲ್ಲಿ ಅಡ್ಡಮತದಾನ ಮಾಡುವಂತೆ ಬಿಜೆಪಿ ಸೂಚಿಸಬಹುದು ಮತ್ತು ಆ ಬಳಿಕವಷ್ಟೇ ಅಗತ್ಯಕ್ಕೆ ತಕ್ಕಂತೆ ಪಕ್ಷಕ್ಕೆ ಸೇರಿಸಿಕೊಳ್ಳಬಹುದು ಎನ್ನಲಾಗಿದೆ.
ರಾಷ್ಟçಪತಿ ಚುನಾವಣೆಯಲ್ಲಿ ಗೋವಾದ ಓರ್ವ ಶಾಸಕನ ಮತ ಮೌಲ್ಯ 20.
ಈಗಾಗಲೇ ಮಾಜಿ ಮುಖ್ಯಮಂತ್ರಿ ಮತ್ತು ಗೋವಾ ಕಾಂಗ್ರೆಸ್ ನಾಯಕ ದಿಗಂಬರ ಕಾಮತ್ ಅವರು ಬಿಜೆಪಿ ನಾಯಕರ ಜೊತೆಗೆ ಮಾತಾಡಿದ್ದಾರೆ ಎನ್ನಲಾಗಿದೆ. ಶಾಸಕರು ಕೂಡಾ ಬಿಜೆಪಿ ನಾಯಕರ ಜೊತೆಗೆ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.
ಗೋವಾದಲ್ಲಿ ಬಹುತೇಕ ಶಾಸಕರು ಹೋಟೆಲ್ ಉದ್ಯಮ ಹೊಂದಿದ್ದಾರೆ. ಬಿಜೆಪಿ ಸರ್ಕಾರ ಕಾಂಗ್ರೆಸ್ ಶಾಸಕರ ಮಾಲೀಕತ್ವದ ಹೋಟೆಲ್ಗಳಿಗೆ ಪದೇ ಪದೇ ನೋಟಿಸ್ ನೀಡಿ ಕಿರುಕುಳ ನೀಡುತ್ತಿದ್ದು ತಮ್ಮ ಉದ್ಯಮ ಉಳಿಸಿಕೊಳ್ಳುವ ಅನಿವಾರ್ಯತೆಯಲ್ಲಿ ಬಿಜೆಪಿಯತ್ತ ಮುಖ ಮಾಡುತ್ತಿದ್ದಾರೆ ಎನ್ನಲಾಗಿದೆ.
2017ರ ವಿಧಾನಸಭಾ ಚುನಾವಣೆಯಲ್ಲಿ 17 ಕಾಂಗ್ರೆಸ್ ಶಾಸಕರು ಆಯ್ಕೆ ಆಗಿದ್ದರು. ಇವರಲ್ಲಿ ಈ ವರ್ಷ ವಿಧಾನಸಭಾ ಚುನಾವಣೆ ವೇಳೆ 14 ಮಂದಿ ಶಾಸಕರು ಬಿಜೆಪಿಗೆ ಸೇರಿದ್ದರು.