ಭಾರತದಿಂದ ಆಮದು ಮಾಡಿಕೊಳ್ಳದ ಗೋಧಿಯನ್ನು ರಫ್ತು ಮಾಡದಂತೆ ಯುನೈಟೆಡ್ ಅರಬ್ ಎಮಿರೇಟ್ಸ್ ನಿಷೇಧ ಹೇರಿದೆ. ಮೇ 13ರಿಂದ ಈ ನಿಷೇಧ ಅನ್ವಯ ಆಗಲಿದೆ.
`ಮೇ 13ರಿಂದ ಭಾರತದಿಂದ ಆಮದು ಮಾಡಿಕೊಳ್ಳಲಾದ (ಯುಎಇಗೆ ಆಮದು) ಗೋಧಿ ಮತ್ತು ಗೋಧಿಹಿಟ್ಟನ್ನು ರಫ್ತು ಮಾಡುವುದಾಗಲೀ ಅಥವಾ ಭಾರತಕ್ಕೆ ಮರು ರಫ್ತು ಮಾಡುವಂತಿಲ್ಲ’ ಎಂದು ಯುಎಇ ಹಣಕಾಸು ಸಚಿವಾಲಯ ಹೇಳಿದೆ.
ರಷ್ಯಾ-ಉಕ್ರೇನ್ ಯುದ್ಧದಿಂದ ಜಾಗತಿಕ ಮಟ್ಟದಲ್ಲಿ ಆಹಾರ ಧಾನ್ಯಗಳ ಪೂರೈಕೆಯಲ್ಲಿ ವ್ಯತ್ಯಯ ಆಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಆಹಾರ ಪದಾರ್ಥಗಳ ಬೆಲೆ ಹೆಚ್ಚಳ ಹಿನ್ನೆಲೆಯಲ್ಲಿ ಭಾರತ ಮೇ 13ರಂದು ವಿದೇಶಿಗಳಿಗೆ ಗೋಧಿ ರಫ್ತು ಮಾಡುವಂತಿಲ್ಲ ಎಂದು ನಿಷೇಧ ಹೇರಿತ್ತು.