ಶೃಂಗೇರಿ ಮಠದಲ್ಲಿ ರೆಡ್ಡಿ ಮೊಮ್ಮಗಳ ಅಕ್ಷರಾಭ್ಯಾಸ

ಮಾಜಿ ಸಚಿವ ಮತ್ತು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ತಮ್ಮ ಮೊಮ್ಮಗಳಿಗೆ ಶೃಂಗೇರಿ ಶಾರದಾಪೀಠದಲ್ಲಿ ಅಕ್ಷರಾಭ್ಯಾಸ ಮಾಡಿಸಿದ್ದಾರೆ. 

ಮಗಳು ಬ್ರಹ್ಮಣಿ ಮತ್ತು ರಾಜೀವ್​ ರೆಡ್ಡಿ ಅವರ ಮೊದಲನೇ ಮಗಳು ಬ್ರಮರಳಿಗೆ ಶಾರದಾಪೀಠದಲ್ಲಿ ಅಕ್ಷರಾಭ್ಯಾಸ ಮಾಡಿಸಿದ್ದಾರೆ.

ಬ್ರಮರಳ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ರೆಡ್ಡಿ ಕುಟುಂಬ ಶೃಂಗೇರಿಗೆ ಭೇಟಿ ನೀಡಿತು.

ಶೃಂಗೇರಿ ಮಠದ ಕಿರಿಯ ಜಗದ್ಗುರು ವಿಧುಶೇಖರ‌ ಭಾರತಿ ಸ್ವಾಮೀಜಿ ಅವರ  ಆಶೀರ್ವಾದ ಪಡೆದರು.