ಬಿಜೆಪಿಗೆ ಸೆಡ್ಡು ಹೊಡೆದು ಹೊಸ ಪಕ್ಷ ಕಟ್ಟಿ ಗೆದ್ದಿದ್ದ ಜನಾರ್ದನ ರೆಡ್ಡಿಗೆ ಸಿಬಿಐ ನ್ಯಾಯಾಲಯ ಅಘಾತ ನೀಡಿದೆ.
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಗಾಲಿ ಜನಾರ್ದನ ರೆಡ್ಡಿ ಮತ್ತು ಅವರ ಪತ್ನಿ ಅರುಣಾಲಕ್ಷ್ಮೀ ಅವರ ಒಡೆತನದ ಆಸ್ತಿಗಳನ್ನು ಜಪ್ತಿ ಮಾಡುವಂತೆ ಬೆಂಗಳೂರಲ್ಲಿರುವ ಸಿಬಿಐ ಕೋರ್ಟ್ ಆದೇಶ ನೀಡಿದೆ.
2009ರಿಂದ ಖರೀದಿ ಮಾಡಲಾದ ಆಸ್ತಿಗಳನ್ನು ಜಪ್ತಿ ಮಾಡಿಕೊಳ್ಳುವಂತೆ ಆದೇಶಿಸಿದೆ.
ರೆಡ್ಡಿ ವಿರುದ್ಧ ದಾಖಲಾಗಿರುವ ಪ್ರಕರಣದ ವಿಚಾರಣೆ ಮುಗಿಯುವವರೆಗೆ ರೆಡ್ಡಿ ದಂಪತಿ ಹೆಸರಲ್ಲಿರುವ 82 ಆಸ್ತಿಗಳ ಜಪ್ತಿಗೆ ನ್ಯಾಯಾಲಯ ಸೂಚಿಸಿದೆ. ಇವುಗಳಲ್ಲಿ 77 ಲಕ್ಷ್ಮೀ ಅರುಣಾ ಅವರ ಹೆಸರಲಿದ್ದರೆ ಉಳಿದ ಐದು ರೆಡ್ಡಿ ಹೆಸರಲ್ಲಿದೆ. ಈ ಆಸ್ತಿಗಳ ಒಟ್ಟು ಮೌಲ್ಯ 65 ಕೊಟಿ ರೂಪಾಯಿ.
ರೆಡ್ಡಿ ಹೆಸರಲ್ಲಿರುವ 6 ಆಸ್ತಿ ಮತ್ತು ಲಕ್ಷ್ಮೀ ಅರುಣಾ ಅವರ ಹೆಸರಲ್ಲಿರುವ 117 ಆಸ್ತಿಗಳ ಜಪ್ತಿಗೆ ಅನುಮತಿ ನೀಡುವಂತೆ ಸಿಬಿಐ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು.
ಈ ವರ್ಷದ ಆರಂಭದಲ್ಲಿ ಅಂದರೆ ಜನವರಿ 12 ರಂದು ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ಬಿಜೆಪಿ ಸರ್ಕಾರ ಅನುಮತಿ ನೀಡಿತ್ತು.
ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷ ಕಟ್ಟಿರುವ ರೆಡ್ಡಿ ಕೊಪ್ಪಳ ಜಿಲ್ಲೆಯ ಗಂಗಾವತಿ ಕ್ಷೇತ್ರದಿಂದ ಗೆದ್ದು ಶಾಸಕರಾಗಿದ್ದಾರೆ.
ADVERTISEMENT
ADVERTISEMENT