ಜೂನ್​ 11ರಿಂದ ಉಚಿತ ಬಸ್​ ಪಾಸ್​ ಗ್ಯಾರಂಟಿ ಜಾರಿ

ಎಲ್ಲ ಮಹಿಳೆಯರಿಗೆ ರಾಜ್ಯ ಸರ್ಕಾರದ ಬಸ್​ಗಳಲ್ಲಿ ಜೂನ್​ 11ರಿಂದ ಉಚಿತ ಪ್ರಯಾಣ ಜಾರಿಯಾಗಲಿದೆ.

ರಾಜ್ಯದ ಒಳಗಷ್ಟೇ ಓಡಾಟಕ್ಕೆ ಸೀಮಿತವಾಗಿದೆ. ಆದರೆ ಜಿಲ್ಲೆಗಳ ನಡುವೆ ಓಡಾಟಕ್ಕೆ ಯಾವುದೇ ನಿರ್ಬಂಧ ಇಲ್ಲ.

ಎಸಿ ಬಸ್​ ಬಿಟ್ಟು ಉಳಿದೆಲ್ಲ ರಾಜಹಂಸ ಒಳಗೊಂಡು ಸರ್ಕಾರಿ ಬಸ್​ಗಳಲ್ಲಿ ಓಡಾಟಕ್ಕೆ ಅವಕಾಶ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಆದರೆ ಕರ್ನಾಟಕದಿಂದ ಹೊರರಾಜ್ಯದ ಪ್ರಯಾಣಕ್ಕೆ ಉಚಿತ ಬಸ್​ ಪಾಸ್​ ಸಿಗಲ್ಲ ಎಂದು ಸಿಎಂ ಹೇಳಿದ್ದಾರೆ.

ಎಸಿ ಸ್ಲೀಪರ್​, ನಾನ್​ಎಸಿ ಸ್ಲೀಪರ್​ ಬಸ್​ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.