ಜುಲೈ 1ರಿಂದ ಅನ್ನಭಾಗ್ಯ ಗ್ಯಾರಂಟಿ ಜಾರಿ

ಅನ್ನಭಾಗ್ಯ ಯೋಜನೆಯಡಿಯಲ್ಲಿ ಕುಟುಂಬದ ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿಯನ್ನು ಜುಲೈ 1ರಿಂದ ವಿತರಣೆ ಮಾಡಲಾಗುತ್ತದೆ.
ಎಲ್ಲ ಬಿಪಿಎಲ್ ಕಾರ್ಡ್​​ದಾರರಿಗೂ ಮತ್ತು ಅಂತ್ಯೋದಯ ಕಾರ್ಡ್​ದಾರರಿಗೆ ಅನ್ನಭಾಗ್ಯದ ಯೋಜನೆಯಡಿ ಮುಂದಿನ ತಿಂಗಳಿಂದ 10 ಕೆಜಿ ಅಕ್ಕಿ ಕೊಡಲಾಗುತ್ತದೆ.
ಅಕ್ಕಿ ಸಂಗ್ರಹದ ಕೊರತೆ ಮತ್ತು ಈಗಾಗಲೇ ಜೂನ್​ ತಿಂಗಳ ಪಡಿತರ ಸಾಮಗ್ರಿ ಪೂರೈಕೆಯಾಗಿರುವ ಹಿನ್ನೆಲೆಯಲ್ಲಿ ಜುಲೈ 1ರಿಂದ ಯೋಜನೆ ಜಾರಿ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.