ADVERTISEMENT
ಫೆಬ್ರವರಿ 17ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಆಯವ್ಯಯ ಮಂಡನೆ ಬಳಿಕ ಬಿಜೆಪಿಯಲ್ಲಿ ದೊಡ್ಡ ಪಕ್ಷಾಂತರ ಪರ್ವ ಆಗಬಹುದು ಎಂದು ಮೂಲಗಳು ತಿಳಿಸಿವೆ.
ಐವರು ಬಿಜೆಪಿ ಶಾಸಕರು ಮತ್ತು ಇಬ್ಬರು ವಿಧಾನಪರಿಷತ್ ಸದಸ್ಯರು ಬಿಜೆಪಿ ಬಿಟ್ಟುಹೋಗಬಹುದು. ಮೂಲಗಳ ಪ್ರಕಾರ ಈ ಏಳೂ ಮಂದಿಯೂ ಕಾಂಗ್ರೆಸ್ ನಾಯಕರ ಜೊತೆಗೆ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.
ಯಾದಗಿರಿ, ಹಾವೇರಿ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಬಿಜೆಪಿ ನಾಯಕರು ಪಕ್ಷಕ್ಕೆ ವಿದಾಯ ಹೇಳಬಹುದು ಎನ್ನಲಾಗಿದೆ.
ಬಿಜೆಪಿ ಬಿಟ್ಟು ಹೋಗಬಹುದು ಎಂದು ಕೇಳಿಬಂದಿರುವ ಶಾಸಕರು ಮತ್ತು ಎಂಎಲ್ಸಿಗಳ ಹೆಸರುಗಳು:
1. ರಾಣೇಬೆನ್ನೂರು ಶಾಸಕ – ಅರುಣ್ ಕುಮಾರ್
2. ನೆಹರು ಓಲೇಕಾರ್ – ಹಾವೇರಿ ಶಾಸಕ
3. ವಿರೂಪಾಕ್ಷಪ್ಪ ರುದ್ರಪ್ಪ – ಬ್ಯಾಡಗಿ ಶಾಸಕ
4. ಹೊಸದುರ್ಗ ಶಾಸಕ – ಗೂಳಿಹಟ್ಟಿ ಶೇಖರ್
5. ಹಿರಿಯೂರು ಶಾಸಕಿ – ಪೂರ್ಣಿಮಾ ಶ್ರೀನಿವಾಸ್
6. ಬಾಬುರಾವ್ ಚಿಂಚನಸೂರು – ಹಾಲಿ ವಿಧಾನಪರಿಷತ್ ಸದಸ್ಯ
7. ವಿಧಾನಪರಿಷತ್ ಸದಸ್ಯ ಆರ್ ಶಂಕರ್
ADVERTISEMENT