ಬೆಂಗಳೂರಲ್ಲಿ ರಸ್ತೆ ಗುಂಡಿ ಮುಚ್ಚಲು ಮೂರು ವರ್ಷಗಳಲ್ಲಿ 7,121 ಕೋಟಿ ರೂ. ಖರ್ಚು..!

ರಾಜಧಾನಿ ಬೆಂಗಳೂರಲ್ಲಿ ಕಳೆದ ಮೂರು ವರ್ಷಗಳಲ್ಲಿ ಕೇವಲ ಗುಂಡಿಗಳನ್ನು ಮುಚ್ಚಲೆಂದೇ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ಖರ್ಚು ಮಾಡಿದ್ದೆಷ್ಟು ಗೊತ್ತಾ..? ಬರೋಬ್ಬರೀ 7 ಸಾವಿರ ಕೋಟಿ ರೂಪಾಯಿಗಿಂತಲೂ ಅಧಿಕ.
2019-20, 2020-21, 2021-2022 ಈ ಮೂರು ವರ್ಷಗಳಲ್ಲಿ ಬಿಬಿಎಂಪಿ ರಸ್ತೆ ಗುಂಡಿಗಳನ್ನು ಮುಚ್ಚಲು 7,121 ಕೋಟಿ ರೂಪಾಯಿ ಸುರಿದಿದೆ.
ಬಿಬಿಎಂಪಿ ಅಂಕಿಅಂಶದ ಪ್ರಕಾರ ಪ್ರತಿ ವರ್ಷ ಪಾಲಿಕೆ 23 ಸಾವಿರದಿಂದ 25 ಸಾವಿರ ರಸ್ತೆ ಗುಂಡಿಗಳನ್ನು ಮುಚ್ಚಿದೆ.
ಮಹದೇವಪುರ ಬಿಬಿಎಂಪಿ ವಲಯವೊಂದರಲ್ಲೇ ರಸ್ತೆ ಗುಂಡಿಗಳನ್ನು ಮುಚ್ಚಲು ಬರೋಬ್ಬರೀ 1,456 ಕೋಟಿ ರೂಪಾಯಿಯನ್ನು ಬಿಬಿಎಂಪಿ ಖರ್ಚು ಮಾಡಿದೆ.
ಯಾವ ವರ್ಷದಲ್ಲಿ ಎಷ್ಟು..?
2019ರಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಬಿಬಿಎಂಪಿ 4,297 ಕೋಟಿ ರೂ., 2020ರಲ್ಲಿ 1,547 ಕೋಟಿ ರೂ. ಮತ್ತು 2022ರ ಅವಧಿಯಲ್ಲಿ 1,277 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ.

LEAVE A REPLY

Please enter your comment!
Please enter your name here