ಖಾಸಗಿ ಟೆಲಿಕಾಂ ಕಂಪನಿ ವೋಡಾಫೋನ್​ಐಡಿಯಾಗೆ ಮೋದಿ ಸರ್ಕಾರದ ಜೀವದಾನ

ಖಾಸಗಿ ಪಾಲುದಾರಿಕೆಯ ಟೆಲಿಕಾಂ ಕಂಪನಿ ವೋಡಾಫೋನ್​ಐಡಿಯಾಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜೀವದಾನ ನೀಡಿದೆ.

ಕೇಂದ್ರ ಸರ್ಕಾರಕ್ಕೆ ವೋಡಾಫೋನ್​ಐಡಿಯಾ ನೀಡಬೇಕಿದ್ದ 16,133 ಕೋಟಿ ರೂಪಾಯಿ ಮೊತ್ತವನ್ನು ಈಗ ಷೇರುಗಳಾಗಿ ಪರಿವರ್ತಿಸಿ ಹಂಚಿಕೆ ಮಾಡುವಂತೆ ಪ್ರಧಾನಿ ಮೋದಿ ಸರ್ಕಾರ ಸೂಚಿಸಿದೆ.

ಅಂದರೆ ವೋಡಾಫೋನ್​ಐಡಿಯಾ ಕಂಪನಿ ಪ್ರತಿ ಷೇರಿಗೆ 10 ರೂಪಾಯಿ ಮುಖಬೆಲೆಯಂತೆ 1,613 ಕೋಟಿಯಷ್ಟು ಈಕ್ವಿಟಿ ಷೇರುಗಳನ್ನು ಕೇಂದ್ರ ಸರ್ಕಾರಕ್ಕೆ ಹಂಚಿಕೆ ಮಾಡಲಿದೆ.

ಈ ಮೂಲಕ ಈಗ ಖಾಸಗಿ ಟೆಲಿಕಾಂ ಕಂಪನಿ ವೋಡಾಫೋನ್​ಐಡಿಯಾದಲ್ಲಿ ಕೇಂದ್ರ ಸರ್ಕಾರ ಅತೀ ದೊಡ್ಡ ಪಾಲುದಾರನಾಗಿ ಬದಲಾಗಿದೆ. 

ಕಳೆದ ವರ್ಷದ ಡಿಸೆಂಬರ್​ ಅಂತ್ಯಕ್ಕೆ ವೋಡಾಫೋನ್​ಪಿಎಲ್​ಸಿ ಶೇಕಡಾ 48ರಷ್ಟು ಮತ್ತು ಉದ್ಯಮಿ ಕುಮಾರಮಂಗಳಬಿರ್ಲಾ ಅವರ ಆದಿತ್ಯ ಬಿರ್ಲಾ ಕಂಪನಿ ಶೇಕಡಾ 27ರಷ್ಟು ಅಂದ್ರೆ ಶೇಕಡಾ 75ರಷ್ಟು ಷೇರನ್ನು ವೋಡಾಫೋನ್​ಐಡಿಯಾದಲ್ಲಿ ಹೊಂದಿತ್ತು.

ಆದರೆ ಈಗ ಕೇಂದ್ರ ಸರ್ಕಾರವೇ ಶೇಕಡಾ 35ರಷ್ಟು ಈಕ್ವಿಟಿ ಷೇರುಗಳನ್ನು ಹೊಂದುವ ಮೂಲಕ ವೋಡಾಫೋನ್​ಐಡಿಯಾದ ಅತೀ ದೊಡ್ಡ ಮಾಲೀಕನಾಗಿ ಬದಲಾಗಿದೆ.

ತರಂಗಾಂತರಗಳ ಬಳಕೆ ಮತ್ತುಪರವಾನಿಗೆ ಶುಲ್ಕವಾಗಿ ಕೇಂದ್ರ ದೂರಸಂಪರ್ಕ ಇಲಾಖೆಗೆ ವೋಡಾಫೋನ್​ ಐಡಿಯಾ 16,133 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿತ್ತು. ಆರ್ಥಿಕ ಸಂಕಷ್ಟದಲ್ಲಿರುವ ಈ ಖಾಸಗಿ ಕಂಪನಿಯನ್ನು ಉಳಿಸುವ ಸಲುವಾಗಿ ಪ್ರಧಾನಿ ಮೋದಿ ಸರ್ಕಾರ ಅಷ್ಟು ಮೊತ್ತದ ಈಕ್ವಿಟಿ ಷೇರುಗಳನ್ನು ಕಂಪನಿಯಲ್ಲಿ ಖರೀದಿ ಮಾಡುವ ಮೂಲಕ ಜೀವದಾನ ನೀಡಿದೆ.

LEAVE A REPLY

Please enter your comment!
Please enter your name here