ಕಣ್ಣು ದೃಷ್ಟಿಯನ್ನೇ ಕಳೆದುಕೊಳ್ಳಲು ಕಾರಣವಾಗಿದೆ ಎನ್ನಲಾಗಿರುವ ಮತ್ತು ಸಾವಿಗೂ ಕಾರಣವಾಗಿದೆ ಎನ್ನಲಾಗಿರುವ EYE Dropನ್ನು ಭಾರತ ಮೂಲದ ಔಷಧ ಕಂಪನಿ ಮಾರುಕಟ್ಟೆಯಿಂದ ವಾಪಸ್ ಪಡೆದಿದೆ.
ಚೆನ್ನೈನಲ್ಲಿರುವ ಗ್ಲೋಬಲ್ ಫಾರ್ಮ ಹೆಲ್ತ್ ಕೇರ್ ಉತ್ಪಾದಿಸುವ EzriCare Artificial Tears ಹೆಸರಿನ EYE Dropನ್ನು ಮಾರುಕಟ್ಟೆಯಿಂದ ವಾಪಸ್ ಪಡೆಯಲಾಗಿದೆ.
ಅಮೆರಿಕದಲ್ಲಿ ಈ EYE Dropನ್ನು ಬಳಸಿದವರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಈ EYE Dropನ್ನು ಬಳಸಿದವರಲ್ಲಿ ಕಣ್ಣಿನಲ್ಲಿ ಸೋಂಕು ಕಾಣಿಸಿಕೊಂಡು ಕಣ್ಣ ದೃಷ್ಟಿ ಕಳೆದುಕೊಂಡಿದ್ದರು.
ಜೊತೆಗೆ ರಕ್ತ, ಶ್ವಾಸಕೋಶ ಮತ್ತು ದೇಹದ ಇತರ ಭಾಗಗಳಲ್ಲೂ EzriCare Artificial Tears ಹೆಸರಿನ EYE Drop ಬಳಕೆಯಿಂದ ಸೋಂಕು ಉಂಟಾಗಿತ್ತು.
EzriCare Artificial Tears ಹೆಸರಿನ EYE Drop ಬಳಕೆಯಿಂದ ಅಮೆರಿಕದಲ್ಲಿ ಇಲ್ಲಿಯವರೆಗೆ ಒಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಕೆಲವರು ದೃಷ್ಟಿ ಕಳೆದುಕೊಂಡಿದ್ದರೆ, ಇನ್ನೂ ಕೆಲವರ ಕಣ್ಣಲ್ಲಿ ಸೋಂಕು ಉಂಟಾಗಿದೆ.
EzriCare Artificial Tears ಹೆಸರಿನ EYE Dropನ ಬಳಕೆಯಿಂದ ಅಮೆರಿಕದಲ್ಲಿ 55 ಅಡ್ಡಪರಿಣಾಮದ ವರದಿಗಳ ಬಂದ ಹಿನ್ನೆಲೆಯಲ್ಲಿ ಅಮೆರಿಕದ ರೋಗ ನಿಯಂತ್ರಣ ಕೇಂದ್ರ (CDC) ಮತ್ತು ಆಹಾರ ಹಾಗೂ ಔಷಧ ಪ್ರಾಧಿಕಾರ (FDA) ಸೂಚನೆ ಮೇರೆಗೆ ಮಾರುಕಟ್ಟೆಯಿಂದ ಈ EzriCare Artificial Tears ಹೆಸರಿನ EYE Dropನ್ನು ವಾಪಸ್ ಪಡೆಯಲಾಗಿದೆ.
ADVERTISEMENT
ADVERTISEMENT