ಆಂಧ್ರ ಪ್ರದೇಶ ಮುಖ್ಯಮಂತ್ರಿ (AndhraPradesh Chief Minister l) ವೈಎಸ್ ಜಗನ್ಮೋಹನ್ ರೆಡ್ಡಿಗೆ (YS JaganMohan Reddy )ಕೇಂದ್ರ ಚುನಾವಣಾ ಆಯೋಗ (Election Commission)ಶಾಕ್ ನೀಡಿದೆ.
ವೈಎಸ್ ಆರ್ ಸಿಪಿ (YSRCP)ಸಭೆಯಲ್ಲಿ ಜಗನ್ ಮೋಹನ್ ರೆಡ್ಡಿಯನ್ನು ಪಕ್ಷದ ಶಾಶ್ವತ ಅಧ್ಯಕ್ಷ (Permanent President)ಎಂದು ಆಯ್ಕೆ ಮಾಡಿದ್ದನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಪ್ರಜಾಪ್ರಭುತ್ವದಲ್ಲಿ (Democracy)ಯಾವುದೇ ರಾಜಕೀಯ ಪಕ್ಷಕ್ಕೆ (Political Party)ಶಾಶ್ವತ ಅಧ್ಯಕ್ಷ, ಶಾಶ್ವತ ಪದವಿ ಎಂಬುದು ಅನ್ವಯಿಸಲ್ಲ. ನಿರ್ದಿಷ್ಟ ಅವಧಿಗೆ ಚುನಾವಣೆಗಳು ನಡೆಯಲೇಬೇಕು. ಶಾಶ್ವತ ಅಧ್ಯಕ್ಷ, ಶಾಶ್ವತ ಹುದ್ದೆ ಎಂಬುದು ಪ್ರಜಾಪ್ರಭುತ್ವದ ಲಕ್ಷಣವಲ್ಲ. ಈ ವಿಚಾರದಲ್ಲಿ ಅನೇಕ ಬಾರಿ ವೈಎಸ್ ಆರ್ ಸಿಪಿಗೆ ಪತ್ರ ಬರೆದರೂ ಸ್ಪಂದಿಸಿಲ್ಲ. ಈ ಬಗ್ಗೆ ಆಂತರಿಕ ವಿಚಾರಣೆ ನಡೆಸಿ ಕೂಡಲೇ ವರದಿ ನೀಡಿ ಎಂದು ಆದೇಶಿಸಿ ಆ ಪಕ್ಷದ ಪ್ರಧಾನ ಕಾರ್ಯದರ್ಶಿ ವಿಜಯಸಾಯಿರೆಡ್ಡಿಗೆ ಚುನಾವಣಾ ಆಯೋಗ ನೊಟೀಸ್ ನೀಡಿದೆ.
ವೈಎಸ್ ಆರ್ ಸಿಪಿ ಶಾಶ್ವತ ಅಧ್ಯಕ್ಷರಾಗಿ ಜಗನ್ರನ್ನು ಚುನಾಯಿಸಲಾಗಿದೆ ಎಂಬ ವರದಿಗಳ ಆಧಾರದ ಮೇಲೆ ಚುನಾವಣಾ ಆಯೋಗ ಈ ಸ್ಪಷ್ಟನೆ ನೀಡಿದೆ.