ಮಕ್ಕಳ ಮೇಲಿನ ಲೈಂಗಿಕ ಪ್ರಕರಣದಲ್ಲಿ (ಪೋಕ್ಸೋ) ಬಂಧಿರಾಗಿರುವ ಚಿತ್ರದುರ್ಗ ಮಠದ ಮುರುಘಾ ಶ್ರೀ ಗಳನ್ನು ಹೃದಯ ಸಂಬಂಧಿ ಖಾಯಿಲೆ ಹಿನ್ನೆಯಲ್ಲಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಶ್ರೀಗಳಿಗೆ ಹೃದಯ ಸಂಬಂಧಿ ಖಾಯಿಲೆಯ ಚಿಕಿತ್ಸೆ ನೀಡಲು ಮೆಗ್ಗಾನ್ ಆಸ್ಪತ್ರೆಗೆ ವರ್ಗಾಯಿಸಲು ಅನುಮತಿ ನೀಡುವಂತೆ ಜೈಲು ಅಧಿಕಾರಿ ನ್ಯಾಯಾಲಯಕ್ಕೆ ವಿನಂತಿ ಮಾಡಿಕೊಂಡಿದ್ದರು. ವಿಚಾರಣೆ ನಡೆಸಿದ್ದ ಸೆಷನ್ಸ್ ಮತ್ತು ಜಿಲ್ಲಾ ಕೋರ್ಟ್ ನ್ಯಾಯಾಧೀಶೆ ಬಿ.ಕೆ.ಕೋಮಲಾ ಸೋಮವಾರ ಅನುಮತಿ ನೀಡಿದ್ದರು.
ಮುರುಘಾ ಶ್ರೀ ಗಳಿಗೆ ಕೊರೋನರಿ ಆಂಜಿಯೋಗ್ರಾಮ ಚಿಕಿತ್ಸೆಗೆ ಕೋರ್ಟ್ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ, ಮುರುಘಾ ಸ್ವಾಮಿ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಚಿತ್ರದುರ್ಗ ಜಿಲ್ಲಾ ಕಾರಾಗೃಹದಿಂದ ಎಸ್ಕಾರ್ಟ್ ಜೊತೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಇಂದು ಬುಧವಾರ ಶ್ರೀಗಳನ್ನು ಶಿಫ್ಟ್ ಮಾಡಲಾಗಿದೆ.
ಇದನ್ನೂ ಓದಿ : Murugha Swamiji : ಮುರುಘಾ ಶ್ರೀ ಜಾಮೀನು ಅರ್ಜಿ ನಾಳೆಗೆ ಮುಂದೂಡಿಕೆ