ನಟ ದಿ. ಪುನೀತ್ ರಾಜ್ ಕುಮಾರ್ ಜನ್ಮದಿಂದು ಸ್ಥಾಪಿಸಿದ್ದ ಡಾ. ರಾಜ್ ಕುಮಾರ್ ಅವರ ಪ್ರತಿಮೆಯನ್ನು ಒಂದೇ ದಿನದಲ್ಲಿ ತೆರವು ಮಾಡಿರುವ ಘಟನೆ ಚಿಕ್ಕಪೇಟೆಯಲ್ಲಿ ನಡೆದಿದೆ. ಬಿಬಿಎಂಪಿ ಕ್ರಮಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಕನ್ನಡ ಪರ ಸಂಘಟನೆಗಳೂ ಸಹ ಇಂದು ಪ್ರತಿಭಟನೆಗೆ ಕರೆ ನೀಡಿದೆ.
ಚಿಕ್ಕಪೇಟೆಯ ವೃತ್ತದಲ್ಲಿ ಅಭಿಮಾನಿಗಳ ಸಂಘದ ವತಿಯಿಂದ ಪುನೀತ್ ಹುಟ್ಟುಹಬ್ಬದ ದಿನದಂದು ವರನಟ ಡಾ. ರಾಜ್ ಕುಮಾರ್ ಅವರ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು.
ಈ ಬಗ್ಗೆ ಪೂರ್ವಾನುಮತಿ ಪಡೆಯದ ಹಿನ್ನೆಲೆಯಲ್ಲಿ , ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಮೆ ಸ್ಥಾಪಿಸುವ ಪ್ರಕ್ರಿಯೆಗೆ ಕಡಿವಾಣ ಹಾಕುವ ದೃಷ್ಟಿಯಿಂದ ಕಾನೂನು ಕ್ರಮ ಕೈಗೆತ್ತಿಗೊಂಡಿರುವ ಬಿಬಿಎಂಪಿ ಜೆಸಿಬಿ ಮೂಲಕ ಪ್ರತಿಮೆ ಸ್ಥಳಾಂತಿಸಿ ಜಾಗವನ್ನು ನೆಲಸಮಗೊಳಿಸಿದ್ದಾರೆ.
ರಾಜ್ ಕುಮಾರ್ ಅಭಿಮಾನಿಗಳು ಬಿಬಿಎಂಪಿ ವಿರುದ್ದ ಕಿಡಿಕಾರಿದ್ದಾರೆ.