ಡಿಕೆಶಿವಕುಮಾರ್​ ವಿರುದ್ಧ ಸುಪ್ರೀಂಕೋರ್ಟ್​ ನಲ್ಲಿ​ CBI ಮೇಲ್ಮನವಿ

DK Shivakumar

ಕರ್ನಾಟಕದಲ್ಲಿ ತಮ್ಮನ್ನೇ ಮುಖ್ಯಮಂತ್ರಿ ಮಾಡುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್​ ಪಟ್ಟು ಹಿಡಿದಿರುವ ಹೊತ್ತಲ್ಲೇ ಇತ್ತ ಕೇಂದ್ರೀಯ ತನಿಖಾ ದಳ (ಸಿಬಿಐ) ಡಿಕೆಶಿ ವಿರುದ್ಧ ಸುಪ್ರೀಂಕೋರ್ಟ್​​ಗೆ ಮೇಲ್ಮನವಿ ಸಲ್ಲಿಸಿದೆ.

2018ರವರೆಗೆ ಸಿದ್ದರಾಮಯ್ಯ ಸರ್ಕಾರದಲ್ಲಿ ಇಂಧನ ಸಚಿವರಾಗಿದ್ದ ವೇಳೆ ಡಿಕೆಶಿ ಅಕ್ರಮ ಸಂಪತ್ತು ಗಳಿಸಿದ್ದರು ಎಂಬ ಆರೋಪದಡಿ ಸಿಬಿಐ ತನಿಖೆಗೆ ಕರ್ನಾಟಕದಲ್ಲಿದ್ದ ಬಿಜೆಪಿ ಸರ್ಕಾರ ಒಪ್ಪಿಗೆ ನೀಡಿತ್ತು.

ಈ ಒಪ್ಪಿಗೆಯನ್ನು ಪ್ರಶ್ನಿಸಿ ಡಿಕೆಶಿವಕುಮಾರ್​​ ಕರ್ನಾಟಕ ಹೈಕೋರ್ಟ್​ ಮೊರೆ ಹೋಗಿದ್ದರು. ಡಿಕೆಶಿ ಅರ್ಜಿ ಆಧರಿಸಿ ಕರ್ನಾಟಕ ಹೈಕೋರ್ಟ್​​ ಸಿಬಿಐ ತನಿಖೆಗೆ ತಡೆಯಾಜ್ಞೆ ನೀಡಿತ್ತು.

ಕರ್ನಾಟಕ ಹೈಕೋರ್ಟ್​ ಆದೇಶ ಪ್ರಶ್ನಿಸಿ ಸಿಬಿಐ ಸುಪ್ರೀಂಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಿದೆ.