ಅಧಿಕಾರ ಹಂಚಿಕೆ ಸೂತ್ರ ಇಲ್ಲ – 5 ವರ್ಷಕ್ಕೆ ಸಿದ್ದರಾಮಯ್ಯರೇ ಮುಖ್ಯಮಂತ್ರಿ

ಕರ್ನಾಟಕ ಮುಖ್ಯಮಂತ್ರಿ ಆಗಿ ನಾಳೆಯೇ ಸಿದ್ದರಾಮಯ್ಯನವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಕಾಂಗ್ರೆಸ್​ ರಾಷ್ಟ್ರೀಯ ನಾಯಕರು ಅಧಿಕಾರ ಹಂಚಿಕೆಯ ಸೂತ್ರವನ್ನು ಮುಂದಿಟ್ಟಿದ್ದರೂ ಸಿದ್ದರಾಮಯ್ಯ ಒಪ್ಪಿಕೊಂಡಿಲ್ಲ.

ಮೂಲಗಳ ಪ್ರಕಾರ ಐದು ವರ್ಷಗಳ ಪೂರ್ಣಾವಧಿಗೆ ಸಿದ್ದರಾಮಯ್ಯ ಅವರೇ ಸಿಎಂ ಆಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೊದಲ ಎರಡು ವರ್ಷ ಸಿದ್ದರಾಮಯ್ಯ ಮತ್ತು ಉಳಿದ ಮೂರು ವರ್ಷ ಡಿಕೆಶಿವಕುಮಾರ್​ ಮುಖ್ಯಮಂತ್ರಿ ಆಗಬೇಕೆಂಬ ಸೂತ್ರವನ್ನು ಹೈಕಮಾಂಡ್​ ಮುಂದಿಟ್ಟಿತ್ತು.

ಆದರೆ ಈ ಸೂತ್ರಕ್ಕೆ ಸಿದ್ದರಾಮಯ್ಯ ಒಪ್ಪಿಕೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.

ಅಧಿಕಾರ ಹಂಚಿಕೆ ಸೂತ್ರಕ್ಕೆ ಸಿದ್ದರಾಮಯ್ಯ ಎತ್ತಿರುವ ಆಕ್ಷೇಪಗಳು ಹೀಗಿವೆ:

1. ಎರಡು ವರ್ಷಕ್ಕಷ್ಟೇ ತಾವು ಸಿಎಂ ಎಂಬ ಸಂದೇಶ ರವಾನೆಯಾದ್ರೆ ಆಡಳಿತದಲ್ಲಿ ಬಿಗಿ ಹಿಡಿತ ತಪ್ಪಲಿದೆ, ಆಡಳಿತ ಹಳಿ ತಪ್ಪಿ ಕಾಂಗ್ರೆಸ್​ ಸರ್ಕಾರ ಹಿನ್ನಡೆ ಆಗಲಿದೆ.

2. ಐದು ವರ್ಷಗಳ ಪೂರ್ಣಾವಧಿ ಆಡಳಿತ ಸಿಕ್ಕರೇ ಮಾತ್ರ ಕಾಂಗ್ರೆಸ್​ ಘೋಷಣೆಗಳನ್ನು ಸಮರ್ಥವಾಗಿ ಜಾರಿಗೊಳಿಸಬಹುದು.

3. ಅವಧಿಗೂ ಮೊದಲೇ ತಮ್ಮನ್ನು ಅಧಿಕಾರದಿಂದ ಇಳಿಸಿದರೆ ಕಾಂಗ್ರೆಸ್​​ಗೆ ಮುಂದಿನ ಚುನಾವಣೆಯಲ್ಲಿ ಅಹಿಂದ ಮತ ನಷ್ಟ ಆಗಬಹುದು.

4. 2028ರಲ್ಲಿ ಕಾಂಗ್ರೆಸ್​ ಮತ್ತೆ ಅಧಿಕಾರಕ್ಕೆ ಬರಬೇಕಾದರೆ ಸುಭದ್ರ ಮತ್ತು ಸಮರ್ಥ ಆಡಳಿತ ನೀಡುವುದು ಅನಿವಾರ್ಯ. ಮಧ್ಯಾವಧಿಯಲ್ಲಿ ಮುಖ್ಯಮಂತ್ರಿ ಬದಲಾವಣೆಯಿಂದ ಈ ಉದ್ದೇಶಕ್ಕೆ ಹಿನ್ನಡೆ ಆಗಬಹುದು.

5. ಡಿಕೆಶಿವಕುಮಾರ್​ ವಿರುದ್ಧ ಭ್ರಷ್ಟಾಚಾರದ ಪ್ರಕರಣಗಳಿರುವ ಕಾರಣ ಮತ್ತು ಭ್ರಷ್ಟಾಚಾರದ ವಿರುದ್ಧವೇ ಕಾಂಗ್ರೆಸ್​ ಹೋರಾಡಿ ಅಧಿಕಾರಕ್ಕೆ ಬಂದಿರುವ ಕಾರಣ ಡಿಕೆಶಿ ಅವರನ್ನು ಮಧ್ಯಾವಧಿಯಲ್ಲಿ ಸಿಎಂ ಮಾಡಿದರೆ ಕಾಂಗ್ರೆಸ್​​ಗೆ ಅತೀ ದೊಡ್ಡ ಮುಖಭಂಗವಾಗಲಿದೆ.