D K ರವಿ ಸಾವಿನ ಸಂಬಂಧ ರೋಹಿಣಿ ಸಿಂಧೂರಿ ವಿರುದ್ಧ ಕೇಸ್​ ಆಗ್ಬೇಕಿತ್ತು, ಆದ್ರೆ ಅವರ ಅದೃಷ್ಟ..! – ಚೆಲ್ಲಾಟಕ್ಕೆ ಈಗ ಅಂತ್ಯ ಹಾಡ್ತಿದ್ದಾರೆ..!

ರೋಹಿಣಿ ಸಿಂಧೂರಿ ಚೆಲ್ಲಾಟಕ್ಕೆ ಈಗ ಡಿ ರೂಪಾ ಅವರು ಅಂತ್ಯ ಹಾಡುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ವಕೀಲ ಸೂರ್ಯ ಮುಕುಂದರಾಜ್​ ಅವರು ಬರೆದುಕೊಂಡಿದ್ದಾರೆ.

ಐಎಎಸ್​ ಅಧಿಕಾರಿ ಡಿ ಕೆ ರವಿ ಆತ್ಮಹತ್ಯೆ ಬಗ್ಗೆ ಸಿಬಿಐ ನೀಡಿದ್ದ ಅಂತಿಮ ವರದಿನ್ನು ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಹಂಚಿಕೊಂಡಿರುವ ಸೂರ್ಯ ಮುಕುಂದರಾಜ್​ ಅವರು

ಆತ ಸಾವಿಗೀಡಾದ ನಂತರ ರೋಹಿಣಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಾಗಬೇಕಿತ್ತು. ಆದರೆ ರೋಣಿಯ ಅದೃಷ್ಟವೋ ಏನೋ ಆಕೆಯ ವಿರುದ್ಧ ಪ್ರಕರಣ ದಾಖಲಾಗಿಲಿಲ್ಲ

ಎಂದು ಬರೆದುಕೊಂಡಿದ್ದಾರೆ.

ಆ ನೋವನ್ನು ಕುಸುಮ ಮತ್ತು ಸಿದ್ದರಾಮಯ್ಯ ಸರ್ಕಾರ ಅನುಭವಿಸಬೇಕಾಯಿತು. ಒಬ್ಬ ಅಧಿಕಾರಿಯ ಸಾವಿನ ನಂತರವೂ ಬದಲಾಗದ ಸಿಂಧೂರಿ ತನ್ನ ಚೆಲ್ಲಾಟವನ್ನು ಮುಂದುವರೆಸಿದ್ದಾರೆ. ಈಗ ರೂಪ ಅದಕ್ಕೆ ಅಂತ್ಯವಾಡುತ್ತಿದ್ದಾರೆ.

ಎಂದು ಸೂರ್ಯ ಮುಕುಂದರಾಜ್​ ಅವರು ಹೇಳಿದ್ದಾರೆ.

ಸಿಂಧೂರಿಯ ಸಿಂಧುತ್ವದ ಬಗ್ಗೆ ಪ್ರಶ್ನೆ ಮಾಡಿರುವ ಕನ್ನಡ ಮಣ್ಣಿನ ಐಪಿಎಸ್ ಅಧಿಕಾರಿ ರೂಪ ಅವರ ನಡೆಯನ್ನು ಪ್ರಶ್ನೆ ಮಾಡುವವರು ಸಿಬಿಐ ಕೊಟ್ಟಿರುವ ಡಿಕೆ ರವಿ ಸಾವಿಗೆ ಕಾರಣವಾದ ಅಂಶಗಳ ವರದಿಯನ್ನು ಓದಬೇಕು.

ಡಿಕೆ ರವಿ ಸಾವನ್ನು ಇಂದಿಗೂ ರಾಜಕೀಯ ಲಾಭಕ್ಕಾಗಿ ಬಿಜೆಪಿಗರು ಬಳಸಿಕೊಳ್ಳುತ್ತಿದ್ದಾರೆ.

ಆತನ ಸಾವಿನಿಂದ ಅತಿ ಹೆಚ್ಚು ತೇಜೋವಧೆ, ಅವಮಾನಕ್ಕೀಡಾದವರು ಕುಸುಮ ಹನುಮಂತರಾಯಪ್ಪ ಅವರ ಕುಟುಂಬ ಮತ್ತು ಸಿದ್ದರಾಮಯ್ಯ. ಪೋಸ್ಟ್ ಟ್ರೂಥ್ ಕಾಲಘಟ್ಟದಲ್ಲಿ ರವಿಯ ವೈಯಕ್ತಿಕ ಪ್ರೇಮ ಪ್ರಕರಣ ಮುನ್ನೆಲೆಗೆ ಬರಲೇ ಇಲ್ಲ

ಎಂದು ಡಿಕೆ ರವಿ ಅವರ ಆತ್ಮಹತ್ಯೆ ಸೂರ್ಯ ಮುಕುಂದರಾಜ್​ ಅವರು ಬರೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here