ಚುನಾವಣಾ ಲೆಕ್ಕ: ಇವತ್ತು ಒಂದೇ ದಿನ ಮೂರು ನಿಗಮಗಳ ರಚನೆ

ಕೆಲವೇ ದಿನಗಳಲ್ಲಿ ವಿಧಾನಸಭಾ ಚುನಾವಣೆ ಘೋಷಣೆ ಆಗಲಿರುವ ಹಿನ್ನೆಲೆಯಲ್ಲಿ ಒಂದೇ ದಿನ ಮೂರು ನಿಗಮಗಳನ್ನು ರಚಿಸಿ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ಆದೇಶ ಹೊರಡಿಸಿದೆ.

1)ಕರ್ನಾಟಕ ಗಾಣಿಗರ ಅಭಿವೃದ್ಧಿ ನಿಗಮ:

ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿರುವ ಗಾಣಿಕ, ತೇಲಿ, ಗಾಂಡ್ಲ್ಯ, ವನಿಯನ್​, ಜ್ಯೋತಿನಗರ, ಜ್ಯೋತಿನಗರ ವೈಶ್ಯ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗೆ ಕರ್ನಾಟಕ ಗಾಣಿಗರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲಾಗಿದೆ.

2) ಕರ್ನಾಟಕ ಹಡಪದ ಅಭಿವೃದ್ಧಿ ನಿಗಮ 

3) ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ:

ಈಡಿಗ-ಬಿಲ್ಲವ ಸಮುದಾಯದಲ್ಲಿ ಬರುವ 26 ಜಾತಿಗಳ ಸಮಗ್ರ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸಿರುವುದಾಗಿ ಸರ್ಕಾರ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.

ಫೆಬ್ರವರಿ 17ರಂದು ಮಂಡನೆಯಾದ ಬಜೆಟ್​ನಲ್ಲಿ ಬಿಲ್ಲವ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪನೆ ಘೋಷಣೆ ಮಾಡಿರಲಿಲ್ಲ. ಇದು ಬಿಲ್ಲವ ಸಮುದಾಯದ ಕೆಂಗಣ್ಣಿಗೆ ಕಾರಣವಾಗಿತ್ತು.

ಕೆಲವೇ ದಿನಗಳಲ್ಲಿ ವಿಧಾನಸಭೆ ವಿಸರ್ಜನೆ ಆಗಿ ಚುನಾವಣಾ ದಿನಾಂಕ ಘೋಷಣೆ ಆಗಲಿರುವ ಹಿನ್ನೆಲೆಯಲ್ಲಿ ಸರ್ಕಾರ ಸಾಲು ಸಾಲಾಗಿ ಈಗ ನಿಗಮಗಳನ್ನು ಘೋಷಣೆ ಮಾಡಿದೆ

LEAVE A REPLY

Please enter your comment!
Please enter your name here