ಕ್ರಿಕೆಟ್​ ಅಭಿಮಾನಿಗಳಿಗೆ ಸಿಹಿ ಸುದ್ದಿ..! ನಿಮಗೂ FREE..!

ಕ್ರಿಕೆಟ್​ ಅಭಿಮಾನಿಗಳಿಗೆ ಸಿಹಿ ಸುದ್ದಿ. ಇನ್ಮುಂದೆ ಡಿಸ್ನಿ ಹಾಟ್​ಸ್ಟಾರ್​ನಲ್ಲೂ (Disney’s Hotstar )
ಉಚಿತವಾಗಿ ಕ್ರಿಕೆಟ್​ ಪಂದ್ಯದ ಪ್ರಸಾರ (Cricket Live Streaming) ವೀಕ್ಷಿಸಬಹುದು.
ಡಿಸ್ನಿ ಹಾಟ್​ಸ್ಟಾರ್​ ಏಷ್ಯಾ ಕಪ್​ (Asia Cup) ಮತ್ತು ಐಸಿಸಿ ಪುರುಷರ ವಿಶ್ವಕಪ್​ನ್ನು (ICC World Cup) ನೇರವಾಗಿ ಉಚಿತವಾಗಿ ಪ್ರಸಾರ ಮಾಡುವ ನಿರ್ಧಾರ ಕೈಗೊಂಡಿದೆ.
ಅಂದರೆ ಏಷ್ಯಾ ಕಪ್​ ಮತ್ತು ವಿಶ್ವಕಪ್​ ವೀಕ್ಷಣೆಗೆ ಇನ್ಮುಂದೆ ಕ್ರಿಕೆಟ್​ ಅಭಿಮಾನಿಗಳು ಡಿಸ್ನಿ ಹಾಟ್​ಸ್ಟಾರ್​ ಹಣವನ್ನು ಪಾವತಿಸಬೇಕಿಲ್ಲ.
ಜಿಯೋ ಸಿನಿಮಾಗೆ ಸೆಡ್ಡು ಹೊಡೆಯುವ ಸಲುವಾಗಿ ಡಿಸ್ನಿ ಹಾಟ್​ಸ್ಟಾರ್​ ಈ ತೀರ್ಮಾನ ಕೈಗೊಂಡಿದೆ.
16ನೇ ಆವೃತ್ತಿಯ ಐಪಿಎಲ್​ ಫೈನಲ್​ ಪಂದ್ಯವನ್ನು ಜಿಯೋ ಸಿನಿಮಾದಲ್ಲಿ 3.2 ಕೋಟಿಯಷ್ಟು ಮಂದಿ ನೇರವಾಗಿ ವೀಕ್ಷಿಸಿದ್ದರು.
ಇದು ಡಿಸ್ನಿ ಹಾಟ್​ಸ್ಟಾರ್​ನ ಒಟ್ಟು 2.5 ಕೋಟಿ ವೀಕ್ಷಣೆಗಿಂತಲೂ ಅಧಿಕ. 
2027ರವರೆಗೆ ಐಪಿಎಲ್​ ನೇರ ಪ್ರಸಾರದ ಹಕ್ಕನ್ನು ಜಿಯೋ ಸಿನಿಮಾವೇ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಡಿಸ್ನಿ ಹಾಟ್​ಸ್ಟಾರ್​ ಈಗ ಏಷ್ಯಾ ಕಪ್​ ಮತ್ತು ವಿಶ್ವಕಪ್​ ನೇರ ಪ್ರಸಾರಕ್ಕೆ ನಿರ್ಧರಿಸಿದೆ.
ಡಿಸ್ನಿ ಹಾಟ್​ಸ್ಟಾರ್​ನ ಚಂದಾದಾರರ ಸಂಖ್ಯೆ ಕಳೆದ ವರ್ಷದ ಅಕ್ಟೋಬರ್​ ವೇಳೆ ಬರೋಬ್ಬರಿ 80 ಲಕ್ಷದಷ್ಟು ಕಡಿಮೆ ಆಗಿತ್ತು. 
ಹೀಗಾಗಿ ಕ್ರಿಕೆಟ್​ ಪಂದ್ಯಗಳ ಲೈವ್​ ಮೂಲಕ ಮತ್ತೆ ತನ್ನ ವೀಕ್ಷಕ ಮಾರುಕಟ್ಟೆಯನ್ನು ವಾಪಸ್​ ಪಡೆಯಲು ಹಾಟ್​ಸ್ಟಾರ್​ ನಿರ್ಧರಿಸಿದೆ.