ಮೆಗಾಸ್ಟಾರ್ ಕುಟುಂಬದಲ್ಲಿ ಸಂಭ್ರಮ – ವರುಣ್​-ಲಾವಣ್ಯ ನಿಶ್ಚಿತಾರ್ಥ

ಟಾಲಿವುಡ್ ರೀಲ್ ಕಪಲ್ ವರುಣ್ ತೇಜ್​ -ಲಾವಣ್ಯ ತ್ರಿಪಾಠಿ ರಿಯಲ್ ಕಪಲ್ ಆಗುತ್ತಿದ್ದಾರೆ. ಶೀಘ್ರವೇ ಈ ಲವ್ ಬರ್ಡ್ಸ್ ಮದುವೆ ನಡೆಯಲಿದೆ. ಶುಕ್ರವಾರ ಸಂಜೆ ಇವರಿಬ್ಬರ ನಿಶ್ಚಿತಾರ್ಥ ಅದ್ಧೂರಿಯಾಗಿ ನೆರವೇರಿದೆ.

ಹೈದರಾಬಾದ್​ನಲ್ಲಿರುವ ಮೆಗಾಸ್ಟಾರ್ ಚಿರಂಜೀವಿ ಸಹೋದರ, ನಟ ನಟ ನಾಗಬಾಬು ನಿವಾಸದಲ್ಲಿ ನಡೆದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಎರಡು ಕುಟುಂಬಗಳ ಸದಸ್ಯರು ಮತ್ತು ಆಪ್ತರು ಪಾಲ್ಗೊಂಡಿದ್ದರು.

ನಿಶ್ಚಿತಾರ್ಥದ ಫೋಟೊಗಳು ರಿವೀಲ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿವೆ.#VarunLav ಹ್ಯಾಷ್​ಟ್ಯಾಗ್ ಟ್ರೆಂಡ್ ಆಗಿದೆ.

2017ರಲ್ಲಿ ರಿಲೀಸ್ ಆದ ಮಿಸ್ಟರ್ ಸಿನಿಮಾಗಾಗಿ ವರುಣ್​-ಲಾವಣ್ಯ ಮೊದಲ ಬಾರಿ ಜೊತೆಯಾಗಿ ನಟಿಸಿದ್ದರು. ಈ ಸಮಯದಲ್ಲಿ ಇಬ್ಬರ ನಡುವೆ ಗೆಳೆತನ ಏರ್ಪಟ್ಟಿತು. ಮರು ವರ್ಷವೇ ಇವರ ಕಾಂಬಿನೇಷನ್​ನಲ್ಲಿಯೇ ಅಂತರಿಕ್ಷ ಸಿನಿಮಾ ಬಂತು. ಈ ಹಂತದಲ್ಲಿಯೇ ಇವರ ಗೆಳೆತನ ಪ್ರೀತಿಯಾಗಿ ಬದಲಾಗಿತ್ತು. 

ಈ ವರ್ಷದ ಕೊನೆಯಲ್ಲಿ ವರುಣ್ ತೇಜ್​- ಲಾವಣ್ಯ ತ್ರಿಪಾಠಿ ಮದುವೆ ನಡೆಯಲಿದೆ. ಲಾವಣ್ಯ ತ್ರಿಪಾಠಿ ಮೂಲತಃ ಅಯೋಧ್ಯೆಯವರು.