AAPಗೆ ಸೇರಿದ ಇಬ್ಬರು ಕಾಂಗ್ರೆಸ್​ ಕಾರ್ಪೋರೇಟರ್​​ಗಳು – ಮೂರೇ ದಿನದಲ್ಲಿ ಕೈಗೆ ಆಘಾತ

Delhi Congress leader joins AAP
Delhi Congress leader joins AAP

ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಮ್​ ಆದ್ಮಿ ಪಕ್ಷ ಪ್ರಚಂಡ ಜಯಗಳಿಸಿದ ಮೂರೇ ದಿನದಲ್ಲಿ ಕಾಂಗ್ರೆಸ್​ ಟಿಕೆಟ್​ನಿಂದ ಆಯ್ಕೆ ಆಗಿದ್ದ ಇಬ್ಬರು ಕಾಪೋರೇಟರ್​ಗಳು ಆಮ್​ ಆದ್ಮಿ ಪಾರ್ಟಿಗೆ ಸೇರ್ಪಡೆ ಆಗಿದ್ದಾರೆ.

ಕಾರ್ಪೋರೇಟರ್​ಗಳಾದ ಸಬಿಲಾ ಬೇಗಂ ಮತ್ತು ನಜಿಯಾ ಕಟೂನ್​​ ಆಮ್​ ಆದ್ಮಿ ಪಾರ್ಟಿಗೆ ಸೇರ್ಪಡೆ ಆಗಿದ್ದಾರೆ.

ಇವರ ಜೊತೆಗೆ ದೆಹಲಿ ಕಾಂಗ್ರೆಸ್​ನ ಉಪಾಧ್ಯಕ್ಷ ಮತ್ತು ದೆಹಲಿ ಕಾಂಗ್ರೆಸ್​ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿದ್ದ ಅಲಿ ಮೆಹ್ದಿ ಕೂಡಾ ಆಪ್​ ಸೇರಿದ್ದಾರೆ.

Delhi Congress leader joins AAP
Delhi Congress leader joins AAP

ಈ ಮೂವರನ್ನೂ ಇವತ್ತು ದೆಹಲಿಯಲ್ಲಿ ಆಪ್​ ಶಾಸಕ ದುರ್ಗೇಶ್​ ಪಾಠಕ್​ ಪಕ್ಷಕ್ಕೆ ಬರಮಾಡಿಕೊಂಡರು.

ಡಿಸೆಂಬರ್​ 7ರಂದು ಪ್ರಕಟವಾದ ದೆಹಲಿ ಪಾಲಿಕೆ ಫಲಿತಾಂಶದಲ್ಲಿ ಒಟ್ಟು 250 ವಾರ್ಡ್​ಗಳ ಪೈಕಿ ಆಪ್​ 134, ಬಿಜೆಪಿ 104 ಮತ್ತು ಕಾಂಗ್ರೆಸ್​ ಕೇವಲ 9 ವಾರ್ಡ್​​ಗಳಲ್ಲಿ ಗೆದ್ದಿತ್ತು.

ಕಾಂಗ್ರೆಸ್​ನ ಇಬ್ಬರು ಕಾರ್ಪೋರೇಟರ್​​ಗಳು ಆಪ್​ ಸೇರಿರುವುದರಿಂದ ಆಪ್​ನ ಬಲ 136ಕ್ಕೆ ಏರಿಕೆ ಆಗಿದೆ. ಕಾಂಗ್ರೆಸ್​ನ ಬಲ 7ಕ್ಕೆ ಕುಸಿದಿದೆ.

ದೆಹಲಿ ಮುಖ್ಯಮಂತ್ರಿ ಮತ್ತು ಆಪ್​ನ ಸರ್ವೋಚ್ಛ ನಾಯಕ ಅರವಿಂದ್​ ಕೇಜ್ರಿವಾಲ್​ ಅವರ ನಾಯಕತ್ವವನ್ನು ಮೆಚ್ಚಿ ಪಕ್ಷಕ್ಕೆ ಬರುತ್ತಿರುವುದಾಗಿ ಮೂವರು ಹೇಳಿಕೊಂಡಿದ್ದಾರೆ.