ಕೋವಿಡ್ (Covid 19) ಸಂದರ್ಭದಲ್ಲಿ ಸಂಗ್ರಹಿಸಲಾಗಿದ್ದ 81 ಕೋಟಿ ಭಾರತೀಯರ ಖಾಸಗಿ ಮಾಹಿತಿಗಳನ್ನು (Data Leak) (ಆಧಾರ್, ಮೊಬೈಲ್ ಸಂಖ್ಯೆ ಇತ್ಯಾದಿ) ಕದ್ದು ಮಾರಾಟಕ್ಕಿಟ್ಟಿದ್ದ ಆರೋಪದಡಿಯಲ್ಲಿ ನಾಲ್ವರನ್ನು ಬಂಧಿಸಲಾಗಿದೆ.
ಒಡಿಶಾ ರಾಜ್ಯದ ಬಿ.ಟೆಕ್ ಪದವೀಧರ, ಹರಿಯಾಣ ರಾಜ್ಯದ ಶಾಲೆ ಬಿಟ್ಟಿದ್ದ ಇಬ್ಬರು ಮತ್ತು ಉತ್ತರಪ್ರದೇಶದ ಝಾನ್ಸಿಯ ಓರ್ವನನ್ನು ದೆಹಲಿ ಪೊಲೀಸರು ಕಳೆದ ವಾರ ಬಂಧಿಸಿದ್ದಾರೆ. ಬಂಧಿತರನ್ನು 7 ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಕೋವಿಡ್ ಸಂದರ್ಭದಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ICMR) ವೆಬ್ಸೈಟ್ನಿಂದ ಖಾಸಗಿ ಮಾಹಿತಿಗಳನ್ನು ಕದ್ದು ಡಾರ್ಕ್ವೆಬ್ನಲ್ಲಿ ಮಾರಾಟಕ್ಕೆ ಇಟ್ಟಿದ್ದರು.
ಆನ್ಲೈನ್ ಗೇಮಿಂಗ್ ಆಪ್ (Online Gaming App) ಮೂಲಕ ಪರಿಚಿತರಾದ ಈ ನಾಲ್ವರೂ ಆ ಬಳಿಕ ಸುಲಭದಲ್ಲಿ ದುಡ್ಡು ಮಾಡುವುದುಕ್ಕೆ ಡಾಟಾ ಮಾಹಿತಿ ಕದ್ದು ಮಾರಾಟ ಮಾಡುವ ಸಂಚು ಮಾಡಿದ್ದರು.
81 ಕೋಟಿ ಭಾರತೀಯರ ಖಾಸಗಿ ಮಾಹಿತಿಗಳನ್ನು (ಆಧಾರ್, ಮೊಬೈಲ್ ಸಂಖ್ಯೆ, ಖಾಸಗಿ ಸಂಬಂಧಗಳ ಮಾಹಿತಿ, ಪ್ಯಾನ್ ಸಂಖ್ಯೆ, ಪಾಸ್ಪೋರ್ಟ್ ಮಾಹಿತಿ, ವಿಳಾಸ) ಇತ್ಯಾದಿಗಳನ್ನು ಡಾರ್ಕ್ವೆಬ್ನಲ್ಲಿ ಮಾರಾಟಕ್ಕೆ ಇಡಲಾಗಿದೆ ಎಂದು ಅಮೆರಿಕದ ಸೈಬರ್ಸೆಕ್ಯೂರಿಟಿ ಸಂಶೋಧನಾ ಸಂಸ್ಥೆ ರೆಸೆಕ್ಯೂರಿಟಿ ಇದೇ ಅಕ್ಟೋಬರ್ನಲ್ಲಿ ವರದಿ ಪ್ರಕಟಿಸಿತ್ತು.
ADVERTISEMENT
ADVERTISEMENT