ಮಾವಿನಹಣ್ಣನ್ನು ಹಣ್ಣುಗಳ ರಾಜ ಎಂದು ಕರೆಯುತ್ತೇವೆ. ಇದು ನಿಜವೂ ಕೂಡ. ಜಪಾನ್ನ ಮೀಯಾ ಜಾಕಿಯ ತಳಿಯ ಮಾವಿನಹಣ್ಣಿನ ಬೆಲೆ ಕೇಳಿದರೇ ನೀವು ಹೌಹಾರುತ್ತೀರಿ. ಈ ತಳಿಯ ಒಂದು ಕೆಜಿ ಹಣ್ಣಿನ ಬೆಲೆ ಬರೋಬ್ಬರಿ 2.50 ಲಕ್ಷ ರೂಪಾಯಿ. ಇದು ಜಗತ್ತಿನ ಅತೀ ದುಬಾರಿ ಬೆಲೆಯ ಮಾವು.
ಕೊಪ್ಪಳದಲ್ಲಿ ತೋಟಗಾರಿಕಾ ಇಲಾಖೆ ಏರ್ಪಡಿಸಿದ್ದ ಮಾವು ಮೇಳದಲ್ಲಿ ಜಪಾನ್ ದೇಶದ ಮೀಯಾ ಜಾಕಿ ತಳಿಯ ಮಾವಿನ ಹಣ್ಣು ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿ ಮಾರ್ಪಟ್ಟಿದೆ. ನೋಡುಗರ ಕಣ್ಣೆಲ್ಲಾ ಅದರತ್ತಲೇ ನೆಟ್ಟಿತ್ತು. ರುಚಿಗಿಂತಲೂ ಅದರ ಬೆಲೆಯೇ ಎಲ್ಲರ ಕಣ್ಣು ಕುಕ್ಕಿಸುತ್ತಿತ್ತು.
ADVERTISEMENT
ಕೊಪ್ಪಳ ಜಿಲ್ಲೆಯ ರೈತರಿಗೆ ಈ ಮೀಯಾ ಜಾಕಿ ತಳಿಯ ಮಾವಿನಹಣ್ಣನ್ನು ಪರಿಚಯಿಸಲು ತೋಟಗಾರಿಕಾ ಇಲಾಖೆ ಜಪಾನ್ನಿಂದ ಸ್ಯಾಂಪಲ್ ರೂಪದಲ್ಲಿ ಒಂದು ಹಣ್ಣನ್ನು ತರಿಸಿದೆ. ಈ ತಳಿಯ ಹಣ್ಣುಗಳು ಒಂದು ಕೆಜಿಗೆ ಐದರಿಂದ ಆರು ತೂಗುತ್ತವೆ. ತೋಟಗಾರಿಕಾ ಇಲಾಖೆ 40 ಸಾವಿರ ರೂಪಾಯಿ ಕೊಟ್ಟು ಒಂದು ಹಣ್ಣನ್ನು ಖರೀದಿಸಿ, ಇಲ್ಲಿ ಪ್ರದರ್ಶನಕ್ಕಿಟ್ಟಿದೆ.
ಕಿತ್ತಳೆ ಬಣ್ಣದ ಮೀಯಾ ಜಾಕಿ ಮಾವಿನ ಹಣ್ಣನ್ನು ಇಷ್ಟು ದುಬಾರಿ ಬೆಲೆ ಕೊಟ್ಟು ಖರೀದಿಸಲಂತೂ ನಮ್ಮಂಥವರ ಕೈಲಿ ಆಗೊದಿಲ್ಲ.. ಕನಿಷ್ಠ ಅದರ ಸುವಾಸನೆಯನ್ನು ಆಘ್ರಾಣಿಸೋಣ.. ಒಂದು ಸೆಲ್ಫಿ ತೆಗೆದುಕೊಳ್ಳೋಣ.. ಅಷ್ಟರಲ್ಲೇ ನಮಗೆ ತೃಪ್ತಿ ಎಂದು ಬಹುತೇಕರು ಫೋಟೋಗೆ ಪೋಸ್ ಕೊಟ್ಟಿದ್ದು ವಿಶೇಷವಾಗಿತ್ತು.
ADVERTISEMENT