ADVERTISEMENT
ಕಾರು ಅಪಘಾತದಲ್ಲಿ ನಟಿ ವೈಷ್ಣವಿ ಉಪಾಧ್ಯಾಯ ಸಾವನ್ನಪ್ಪಿದ್ದಾರೆ. ಹಿಮಾಚಲಪ್ರದೇಶದಲ್ಲಿ ನಡೆದ 32 ವರ್ಷದ ನಟಿ ಪ್ರಾಣ ಕಳೆದುಕೊಂಡಿದ್ದಾರೆ.
ಇವತ್ತು ಬೆಳಗ್ಗೆ 11 ಗಂಟೆಗೆ ಮುಂಬೈಯಲ್ಲಿ ನಟಿಯ ಅಂತ್ಯಕ್ರಿಯೆ ನಡೆಯಲಿದೆ.
ತನ್ನ ಗೆಳೆಯನ ಜೊತೆಗೆ ವೈಷ್ಣವಿ ಅವರು ಹಿಮಾಚಲಪ್ರದೇಶದಲ್ಲಿ ಪ್ರಯಾಣಿಸುತ್ತಿದ್ದರು. ನಿನ್ನೆ ಮಧ್ಯಾಹ್ನದ ವೇಳೆಗೆ ಕಾರು ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾಗಿದೆ.
ಪ್ರಸಿದ್ಧ ಧಾರವಾಹಿ ಸಾರಾಭಾಯಿ ವರ್ಸಸ್ ಸಾ್ರಾಭಾಯಿಯಲ್ಲಿ ವೈಷ್ಣವಿ ಅವರು ಜಾಸ್ಮಿನ್ ಪಾತ್ರದ ಮೂಲಕ ಮನೆಮಾತಾಗಿದ್ದರು.
ಜೊತೆಗೆ ದೀಪಿಕಾ ಪಡುಕೋಣೆ ಅವರ ಜೊತೆಗೆ ಚಪಕ್ ಸಿನಿಮಾದಲ್ಲಿ ನಟಿಸಿದ್ದರು.
ADVERTISEMENT