ADVERTISEMENT
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದೇಶಕ್ಕಾಗಿ ದೇಣಿಗೆ ಎಂಬ ಹೆಸರಲ್ಲಿ ಇಂದಿನಿಂದ ಅಭಿಯಾನ ಆರಂಭಿಸಿದೆ.
1 ಲಕ್ಷದ 38 ಸಾವಿರ ರೂಪಾಯಿ (1,38,000) ದೇಣಿಗೆ ನೀಡುವ ಮೂಲಕ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೇಣಿಗೆ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದರು.
ಕಾಂಗ್ರೆಸ್ ಪಕ್ಷ ಸ್ಥಾಪನೆಯಾಗಿ 138 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ 138, 1,380 ಮತ್ತು 13,800 ಅಥವಾ ಬೇರೆ ಮೊತ್ತವನ್ನು ದೇಣಿಗೆ ನೀಡಬಹುದು ಎಂದು ಕಾಂಗ್ರೆಸ್ ಘೋಷಿಸಿದೆ.
ಮೊಬೈಲ್ ಮೂಲಕವೇ ಖರ್ಗೆ ಅವರು ದೇಣಿಗೆ ಮೊತ್ತವನ್ನು ಜಮೆ ಮಾಡಿದರು.
ಇದೇ ವರ್ಷದ ಜುಲೈನಲ್ಲಿ ಎಡಿಆರ್ ಪ್ರಕಟಿಸಿದ ವರದಿ ಪ್ರಕಾರ ಚುನಾವಣಾ ಬಾಂಡ್ಗಳ ಮೂಲಕ ಬಿಜೆಪಿಗೆ ಅತ್ಯಧಿಕ ಅಂದರೆ 5,271 ಕೋಟಿ ರೂಪಾಯಿ ಮೊತ್ತ ಲಭಿಸಿದ್ದರೆ, ಕಾಂಗ್ರೆಸ್ಗೆ 952 ಕೋಟಿ ರೂಪಾಯಿ ದೇಣಿಗೆಯಷ್ಟೇ ಲಭ್ಯವಾಗಿತ್ತು.
ಕಳೆದ ವರ್ಷದ ಆರಂಭದ ವೇಳೆಗೆ ಕಾಂಗ್ರೆಸ್ 4.5 ಕೋಟಿಯಷ್ಟು ಸದಸ್ಯ ಕಾರ್ಯಕರ್ತರನ್ನು ಹೊಂದಿತ್ತು.
ADVERTISEMENT