BREAKING: ಬಸವನಗುಡಿ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್​ ಅಭ್ಯರ್ಥಿ ಅಂತಿಮ..?

ಗುರು ರಾಘವೇಂದ್ರ ಬ್ಯಾಂಕ್ ನ ಅವ್ಯವಹಾರ ದಿಂದ ಮೋಸಕ್ಕೊಳಗಾದ ಷೇರುದಾರರು ಮತ್ತು ಠೇವಣಿದಾರರು ರಾಘವೇಂದ್ರ ಬ್ಯಾಂಕ್ ನ ಎದುರು ಸರ್ಕಾರದ ವಿರುದ್ಧ ತಮಗಾಗಿರುವ ಅನ್ಯಾಯದ ಬಗ್ಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಎಂಎಲ್​ಸಿ ಯು ಬಿ ವೆಂಕಟೇಶ್​
ಗುರು ರಾಘವೇಂದ್ರ ಬ್ಯಾಂಕ್ ನ ಅವ್ಯವಹಾರ ದಿಂದ ಮೋಸಕ್ಕೊಳಗಾದ ಷೇರುದಾರರು ಮತ್ತು ಠೇವಣಿದಾರರು ರಾಘವೇಂದ್ರ ಬ್ಯಾಂಕ್ ನ ಎದುರು ಸರ್ಕಾರದ ವಿರುದ್ಧ ತಮಗಾಗಿರುವ ಅನ್ಯಾಯದ ಬಗ್ಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಎಂಎಲ್​ಸಿ ಯು ಬಿ ವೆಂಕಟೇಶ್​
ಬಸವನಗುಡಿ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್​ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.
ವಿಧಾನಪರಿಷತ್​ ಸದಸ್ಯರಾಗಿರುವ ಯು ಬಿ ವೆಂಕಟೇಶ್​ ಅವರನ್ನು ಬಸವನಗುಡಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ನಿರ್ಧರಿಸಿದೆ.
ಯು ಬಿ ವೆಂಕಟೇಶ್​ ಅವರು ಬ್ರಾಹ್ಮಣ ಸಮುದಾಯದವರು. 1972ರಲ್ಲಿ ಸಕ್ರಿಯ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದಾರೆ. 
ಬ್ರಾಹ್ಮಣ ಸಮುದಾಯದ ಮತದಾರರು ಹೆಚ್ಚಾಗಿರುವ ಈ ವಿಧಾನಸಭಾ ಕ್ಷೇತ್ರದಲ್ಲಿ ಡಾ ಶಂಕರ್​ಗುಹಾ ದ್ವಾರಕನಾಥ್​ ಅವರು ಕೂಡಾ ಟಿಕೆಟ್​ ಆಕಾಂಕ್ಷಿಯಾಗಿದ್ದರು.
ಆದರೆ ಗುಹಾ ಅವರನ್ನು ಮನವೊಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಯು ಬಿ ವೆಂಕಟೇಶ್​ ಅವರು ಮೀನಾಕ್ಷಿ ಮಾಲ್​ನ ಎಂಡಿ ಮತ್ತು ಸಂಯುಕ್ತ ಕರ್ನಾಟಕ ಪತ್ರಿಕೆಯನ್ನು ಪ್ರಕಟಿಸುವ ಲೋಕ ಶಿಕ್ಷಣ ಟ್ರಸ್ಟ್​ನ ಮುಖ್ಯಸ್ಥರು ಕೂಡಾ ಹೌದು.

LEAVE A REPLY

Please enter your comment!
Please enter your name here