ಜನವರಿ 26ರಂದು ಬಿಡುಗಡೆ ಆಗಲಿರುವ ತಮ್ಮ ಹೊಸ ಸಿನಿಮಾ ಕ್ರಾಂತಿ ಚಿತ್ರದ ಪ್ರಚಾರದ ಭಾಗವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಯೂಟ್ಯೂಬ್ ಚಾನೆಲ್ಗಳಿಗೆ ಸಂದರ್ಶನ ನೀಡುತ್ತಿದ್ದಾರೆ.
ಇಂಥದ್ದೇ ಸಂದರ್ಶನವೊಂದರಲ್ಲಿ ನಟ ದರ್ಶನ್ ಅವರು ಆಡಿರುವ ಮಾತೊಂದು ಈಗ ವಿವಾದಕ್ಕೆ ಕಾರಣವಾಗಿದೆ.
ಅದೃಷ್ಟ ದೇವತೆಯನ್ನು ಬಟ್ಟೆಬಿಚ್ಚಿಸಿ ಬೆಡ್ರೂಂನಲ್ಲಿ ಕೂರಿಸಬೇಕು ಎಂದು ನಟ ದರ್ಶನ್ ಆಡಿರುವ ಮಾತು ಟೀಕೆಗೆ ಮೂಲವಾಗಿದೆ.
ಅದೃಷ್ಟ ದೇವತೆ ಆಕ್ಚುಲಿ ಯಾವತ್ತೂ ಡೋರ್ ತಟ್ಟಲ್ವಂತೆ. ಅವಳು ಯಾವತ್ತು ಡೋರ್ ತಟ್ತಾಲೋ you should grab her (ಆಕೆಯನ್ನು ಎಳೆಕೊಂಡು ಬಂದು) ಬಟ್ಟೆ ಬಿಚ್ಚಿಸಿ ಬೆಡ್ ರೂಂನಲ್ಲಿ ಕೂರಿಸ್ಕೋಬಿಡ್ಬೇಕಂತೆ. ಬಟ್ಟೆ ಕೊಟ್ರೆ (ಅದೃಷ್ಟ ದೇವತೆಗೆ ಬಟ್ಟೆ ಕೊಟ್ರೆ) ಇನ್ನೊಬ್ರ ಮನೆಗೆ ಹೊರಟ್ಹೋಗಿ ಬಿಡ್ತಾಳೆ
ಎಂದು ನಟ ದರ್ಶನ್ ಸಂದರ್ಶನದಲ್ಲಿ ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗಿವೆ.
ADVERTISEMENT
ADVERTISEMENT