ಗೆಳೆಯ ಕಿಚ್ಚನಿಗೆ ಡಿಬಾಸ್​ ವಿಶೇಷ ಧನ್ಯವಾದ – ಕುಚುಕುಗಳ ಅಭಿಮಾನಿಗಳಲ್ಲಿ ಖುಷಿಯೋ ಖುಷಿ

ತಮ್ಮ ಮೇಲೆ ಚಪ್ಪಲಿ ಎಸೆದಿದ್ದನ್ನು ಖಂಡಿಸಿ ಸುದೀರ್ಘ ಪತ್ರ ಬರೆದಿದ್ದ ಗೆಳೆಯ ಕಿಚ್ಚ ಸುದೀಪ್​ ಅವರಿಗೆ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅವರು ವಿಶೇಷವಾಗಿ ಧನ್ಯವಾದ ಸಲ್ಲಿಸಿದ್ದಾರೆ.
ನಿಮ್ಮ ಪ್ರೀತಿಯ ಸಾಲುಗಳಿಗೆ ಧನ್ಯವಾದಗಳು ಎಂದು ಹೇಳಿ ವಿಶೇಷವಾಗಿ ನೇರವಾಗಿ ಅವರನ್ನೇ ಟ್ಯಾಗ್​​ ಮಾಡಿ ಟ್ವೀಟಿಸಿದ್ದಾರೆ.

ಕಿಚ್ಚ ಸುದೀಪ್​ ಅವರಿಗೆ ಟ್ಯಾಗ್​ ಮಾಡಿ ದರ್ಶನ್​ ಅವರು ಟ್ವೀಟಿಸಿದ್ದು ದರ್ಶನ್​ ಮತ್ತು ಕಿಚ್ಚ ಅವರ ಅಭಿಮಾನಿಗಳಲ್ಲಿ ಹೊಸ ಸಂತಸ ಕಾರಣವಾಗಿದೆ.
ದೀರ್ಘ ಕಾಲದಿಂದ ಕಿಚ್ಚ ಸುದೀಪ್​ ಮತ್ತು ದರ್ಶನ್​ ಅವರ ಅಭಿಮಾನಿಗಳ ನಡುವೆ ನಡೆಯುತ್ತಿದ್ದ ಸಂಘರ್ಷ ಈ ಮೂಲಕ ಕೊನೆಯಾಗಿದೆ.
ಇದು ಬೇಕಿತ್ತು ಸರ್​ ಎಂದು ಅಭಿಮಾನಿಯೊಬ್ಬರು ಪ್ರತಿಕ್ರಿಯಿಸಿದರೆ, 2020ರ ಬಳಿಕ ನಾನು ನೋಡಿದ ಅತ್ಯುತ್ತಮ ಘಟನೆ ಇದು ಎಂದು ಇನ್ನೋರ್ವ ಅಭಿಮಾನಿ ಟ್ವೀಟಿಸಿದ್ದಾರೆ.

ಬಾಸ್ special mention ಮಾಡಿದರೆ ಅಂದ್ರೆ special ಜಾಗ ಇದೆ ಅವರ ಹೃದಯದಲ್ಲಿ ಅಂತ ಅರ್ಥ ಎಂದು ಇನ್ನೊಬ್ಬರು ಅಭಿಮಾನಿಯೊಬ್ಬರು ಟ್ವೀಟಿಸಿದ್ದಾರೆ.