ಹಾಳು ಮಾಡೋಕೆ ನೂರು ಜನ ಇದ್ರೆ, ಕಾಯೋಕೆ ಕೋಟ್ಯಾಂತರ ಸೆಲೆಬ್ರೆಟಿಗಳಿದ್ದಾರೆ – ಡಿಬಾಸ್​ ದರ್ಶನ್​ ಮೊದಲ ಪ್ರತಿಕ್ರಿಯೆ

ತಮ್ಮ ವಿರುದ್ಧ ಕಿಡಿಗೇಡಿ ಚಪ್ಪಲಿ ಎಸೆದಿದ್ದನ್ನು ಖಂಡಿಸಿ ತಮ್ಮ ಜೊತೆಗೆ ನಿಂತ ಎಲ್ಲರಿಗೂ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಧನ್ಯವಾದ ಸಲ್ಲಿಸಿದ್ದಾರೆ.
ಈ ಬಗ್ಗೆ ಅಧಿಕೃತ ಫೇಸ್​ಬುಕ್​ ಖಾತೆ ಮತ್ತು ಟ್ವಿಟ್ಟರ್​ ಖಾತೆಯಲ್ಲಿ ಬರೆದುಕೊಂಡಿರುವ ದರ್ಶನ್​ ಅವರು
ಹಾಳು ಮಾಡೋಕೆ ನೂರು ಜನ ಇದ್ರೆ, ಕಾಯೋಕೆ ಕೋಟ್ಯಾಂತರ ಸೆಲೆಬ್ರೆಟಿಗಳಿದ್ದಾರೆ ಎಂದು ಹೇಳಿದ್ದಾರೆ.
ಈ ಸಮಯದಲ್ಲಿ ನನಗಿಂತಲೂ ನನ್ನ ಸೆಲೆಬ್ರಿಟಿಗಳಿಗೆ ಹೆಚ್ಚು ನೋವಾಗಿದೆ ಎಂಬ ಅರಿವು ನನಗಿದೆ. ಇಂಥ ಘಟನೆಗಳು ಒಬ್ಬ ವ್ಯಕ್ತಿಯನ್ನು ಮತ್ತಷ್ಟು ಬಲಪಡಿಸುತ್ತದೆಯೇ ಹೊರತೂ ಬಲಹೀನನನ್ನಾಗಿ ಮಾಡುವುದಿಲ್ಲ.
ಅದಕ್ಕೆ ತಕ್ಕ ಉದಾಹರಣೆಗಳು ನಮ್ಮ ಕನ್ನಡ ನೆಲದಲ್ಲೇ ನೋಡಿದ್ದೇವೆ.
ಈ ಸಮಯದಲ್ಲಿ ನ್ಯಾಯದ ಪರ ನಿಂತ ಪ್ರತಿಯೊಬ್ಬ ಚಿತ್ರರಂಗದ ಗೆಳೆಯರು, ನಟರಿಗೆ ಧನ್ಯವಾದಗಳು. ಈ ಘಟನೆಯನ್ನು ತಪ್ಪು ಹಾದಿಯಲ್ಲಿ ಪ್ರೇರೇಪಿಸಲು ಪ್ರಯತ್ನಿಸಿದ ಕೆಲವರಿಗೂ ಧನ್ಯವಾದಗಳು.
ಮೊದಲಿಂದಲೂ ಹೇಳಿಕೊಂಡು ಬಂದಿದ್ದೇನೆ, ಹಾಳು ಮಾಡೋಕೆ ನೂರು ಜನ ಇದ್ರೆ, ಕಾಯೋಕೆ ನಮ್ಮ ಕೋಟ್ಯಾಂತರ ಸೆಲೆಬ್ರಿಟಿಗಳಿರುತ್ತಾರೆ. ನಿಮ್ಮ ಈ ಪ್ರೀತಿಯ ಅಪ್ಪುಗೆಗೆ ಈ ದಾಸ ಸದಾ ಚಿರಋಣಿ
ಎಂದು ನಟ ದರ್ಶನ್​ ಅವರು ಬರೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here