H D ಕುಮಾರಸ್ವಾಮಿಗೆ ಆಘಾತ: NDA ಸಭೆಗೆ JDSಗೆ ಆಹ್ವಾನವೇ ಇಲ್ಲ..!

ಬಿಜೆಪಿ ನೇತೃತ್ವದ ಎನ್​ಡಿಎ ಸಭೆಗೆ ಆಹ್ವಾನ ಬರಬಹುದು ಎಂದು ಕಾಯುತ್ತಿದ್ದ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಅವರಿಗೆ ಆಘಾತವಾಗಿದೆ.

ಎನ್​ಡಿಎ ಸಭೆಗೆ ಜೆಡಿಎಸ್​ಗೆ ಬಿಜೆಪಿ ಆಹ್ವಾನವನ್ನೇ ನೀಡಿಲ್ಲ. ಇವತ್ತು ದೆಹಲಿಯಲ್ಲಿ ನಡೆಯಲಿರುವ ಎನ್​ಡಿಎ ಸಭೆಯಲ್ಲಿ ಭಾಗಿಯಾಗಲಿರುವ 38 ಪಕ್ಷಗಳ ಅಧಿಕೃತ ಪಟ್ಟಿಯಲ್ಲಿ ಜೆಡಿಎಸ್​ ಹೆಸರೇ ಇಲ್ಲ.

ಇತ್ತ ಬಿಜೆಪಿ ಕಡೆಗೆ ವಾಲಿರುವ ಹಿನ್ನೆಲೆಯಲ್ಲಿ ಜೆಡಿಎಸ್​​ಗೆ ಬೆಂಗಳೂರಲ್ಲಿ ನಡೆಯುತ್ತಿರುವ ವಿರೋಧ ಪಕ್ಷಗಳ ಸಭೆಗೂ ಆಹ್ವಾನ ನೀಡಲಾಗಿಲ್ಲ.

ಎನ್​ಡಿಎ ಸಭೆಗೆ ಮಿತ್ರ ಪಕ್ಷಗಳಿಗೆ ಸ್ವತಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರೇ ಪತ್ರ ಬರೆದು ಆಹ್ವಾನಿಸಿದ್ದರು. ಆದರೆ ಬೆಂಗಳೂರಲ್ಲೇ ಇರುವ ಕುಮಾರಸ್ವಾಮಿ ಅವರಿಗೆ ಪತ್ರವೂ ಬಂದಿಲ್ಲ, ದೂರವಾಣಿ ಕರೆಯೂ ಬಂದಿಲ್ಲ.

ಅತ್ತ ಎನ್​ಡಿಎ ಸಭೆಗೂ ಆಹ್ವಾನ ಇಲ್ಲದೇ ಇತ್ತ ವಿರೋಧ ಪಕ್ಷಗಳ ಒಕ್ಕೂಟದ ಸಭೆಗೂ ಆಹ್ವಾನ ಇಲ್ಲದೇ ಕುಮಾರಸ್ವಾಮಿ ಆಘಾತಗೊಂಡಿದ್ದಾರೆ.

ಇತ್ತ ಎನ್​ಡಿಎ ಸಭೆಗೆ ಆಹ್ವಾನ ನೀಡದ ಹಿನ್ನೆಲೆಯಲ್ಲಿ ನಾಳೆಯೇ ಮಾಜಿ ಪ್ರಧಾನಿ ಮತ್ತು ಜೆಡಿಎಸ್​ ವರಿಷ್ಠ ಹೆಚ್​ ಡಿ ದೇವೇಗೌಡ ಅವರು ದೆಹಲಿಗೆ ಹೋಗಿ ಬಿಜೆಪಿ ರಾಷ್ಟ್ರೀಯ ನಾಯಕರನ್ನು ಭೇಟಿ ಆಗುವ ನಿರೀಕ್ಷೆ ಇದೆ.

LEAVE A REPLY

Please enter your comment!
Please enter your name here