ಬಿಲ್ಕಿಸ್​ ಬಾನೋ ಅತ್ಯಾಚಾರಿಗಳಲ್ಲಿ ಕೆಲವರು ಬ್ರಾಹ್ಮಣರು, ಒಳ್ಳೆಯ ಸಂಸ್ಕಾರ ಹೊಂದಿದ್ದಾರೆ – ಬಿಜೆಪಿ ಶಾಸಕರ ಹೇಳಿಕೆ

ಬಿಲ್ಕಿಸ್​ ಬಾನೋ ಮೇಲೆ ಅತ್ಯಾಚಾರ ನಡೆಸಿದ್ದವರಲ್ಲಿ ಕೆಲವರು ಬ್ರಾಹ್ಮಣರಾಗಿದ್ದರು ಮತ್ತು ಅವರು ಒಳ್ಳೆಯ ಸಂಸ್ಕಾರ ಹೊಂದಿದ್ದಾರೆ ಎಂದು ಗೋಧ್ರಾ ಬಿಜೆಪಿ ಶಾಸಕ ಸಿ ಕೆ ರೌಲ್ಜಿ (BJP MLA C K Raulji) ಹೇಳಿದ್ದಾರೆ.

ಗುಜರಾತ್​​ನ ಗೋಧ್ರಾದಲ್ಲಿ (Godhra) ಬಿಲ್ಕಿಸ್​ ಭಾನು (Bilkis Bhanu) ಮೇಲೆ ಅತ್ಯಾಚಾರ ನಡೆಸಿದ್ದ 15 ಮಂದಿ ಅಪರಾಧಿಗಳನ್ನು ಸನ್ನಡತೆಯ ಆಧಾರದಲ್ಲಿ ಆಗಸ್ಟ್​ 15ರಂದು ಗುಜರಾತ್​ನ (Gujarat) ಬಿಜೆಪಿ ಸರ್ಕಾರ ಜೈಲಿನಿಂದ ಬಿಡುಗಡೆ ಮಾಡಿತ್ತು.

ಕೈದಿಗಳನ್ನು ಸನ್ನಡತೆಯ ಆಧಾರದಲ್ಲಿ ಬಿಡುಗಡೆ ಸಂಬಂಧ ಶಿಫಾರಸ್ಸು ಮಾಡಲು ರಾಜ್ಯ ಸರ್ಕಾರ ರಚಿಸಿರುವ ಸಮಿತಿಯಲ್ಲಿ ಬಿಜೆಪಿ ಶಾಸಕ ರೌಲ್ಜಿ ಕೂಡಾ ಒಬ್ಬರು.

ನಾವು ಸುಪ್ರೀಂಕೋರ್ಟ್​ ಆದೇಶದಡಿ ನಿರ್ಧಾರ ತೆಗೆದುಕೊಂಡಿದ್ದೇವೆ. ಅವರ ವರ್ತನೆಯನ್ನು ಗಮನಿಸಿ ನಿರ್ಧಾರ ಕೈಗೊಳ್ಳುವಂತೆ ನಮಗೆ ಸೂಚಿಸಲಾಗಿತ್ತು. ನಾವು ಈ ಬಗ್ಗೆ ಜೈಲರ್​ ಬಳಿ ಕೇಳಿದ್ವಿ. ಅವರ ವರ್ತನೆ ಜೈಲಿನಲ್ಲಿ ಸನ್ನಡೆತೆಯಿಂದ ಕೂಡಿತ್ತು ಎಂದು ಕೇಳಿಪಟ್ವಿ. ಜೊತೆಗೆ ಅದರಲ್ಲಿ ಕೆಲವರು ಬ್ರಾಹ್ಮಣರಾಗಿದ್ದರು ಮತ್ತು ಅವರು ಒಳ್ಳೆಯ ಸಂಸ್ಕಾರ ಹೊಂದಿದ್ದರು

ಎಂದು ಬಿಜೆಪಿ ಶಾಸಕ ಸಿ ಕೆ ರೌಲ್ಜಿ ಹೇಳಿದ್ದಾರೆ.

2002ರಲ್ಲಿ ನಡೆದಿದ್ದ ಹಿಂಸಾಚಾರದಲ್ಲಿ ಬಿಲ್ಕಿಸ್​ ಭಾನು ಮೇಲೆ ಕುಟುಂಬದ ಮೇಲೆ ದಾಳಿ ನಡೆಸಿದ್ದ ಈ 11 ಮಂದಿ ಅಪರಾಧಿಗಳು ಆಕೆಯ ಕುಟುಂಬದ 7 ಮಂದಿಯನ್ನು ಕೊಲೆಗೈದಿದ್ದರು ಮತ್ತು 5 ತಿಂಗಳ ಗರ್ಭಿಣಿ ಆಗಿದ್ದ ಬಿಲ್ಕಿಸ್​ ಭಾನು ಮೇಲೆ ಅತ್ಯಾಚಾರ ಎಸಗಿದ್ದರು.

2008ರಲ್ಲಿ ಮುಂಬೈನ ಸಿಬಿಐ ಕೋರ್ಟ್​​ 11 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿತ್ತು.

ಆಗಸ್ಟ್​ 15ರಂದು ಜೈಲಿನಿಂದ ಬಿಡುಗಡೆ ಆದ ಈ 11 ಮಂದಿ ಅಪರಾಧಿಗಳನ್ನು ವಿಹೆಚ್​ಪಿ ಹಾರ ಹಾಕಿ ಸ್ವಾಗತಿಸಿತ್ತು.

LEAVE A REPLY

Please enter your comment!
Please enter your name here