ನೈಟ್​​ಕ್ಲಬ್​ನಲ್ಲಿ ಗೆಳೆಯರೊಂದಿಗೆ ಪ್ರಧಾನಿ ಪಾರ್ಟಿ – ವೀಡಿಯೋ ಬಹಿರಂಗ

ಗೆಳೆಯರು ಮತ್ತು ಗೆಳತಿಯರ ಜೊತೆಗೆ ಮದ್ಯಪಾನ ಮಾಡಿ ಪ್ರಧಾನಮಂತ್ರಿ ಪಾರ್ಟಿ (Night Club Party) ಮಾಡುತ್ತಿರುವ ವೀಡಿಯೋ ಸೋರಿಕೆ ಆಗಿದೆ.

ಫಿನ್​ಲ್ಯಾಂಡ್ (Finland)​ ದೇಶದ ಪ್ರಧಾನಿ ಸನ್ನಾ ಮರಿನ್​ (Prime Minister Sanna Marin) ಅವರು ಪಾರ್ಟಿಯಲ್ಲಿ ಮದ್ಯಪಾನ ಸೇವಿಸಿ ಕುಣಿದು ಕುಪ್ಪಳಿಸುತ್ತಿರುವ ವೀಡಿಯೋ ಸೋರಿಕೆ ಆಗಿದೆ.

ಈ ಬಗ್ಗೆ ಸನ್ನಾ ಮರಿನ್​ ತಮ್ಮ ಸೋಷಿಯಲ್​ ಡೆಮಾಕ್ರಾಟಿಕ್​ ಪಕ್ಷದ (Social Democratic Party SDP) ಸಂಸದೀಯ ಸಭೆಗೂ ಮೊದಲು ಪ್ರತಿಕ್ರಿಯೆ ನೀಡಿದ್ದಾರೆ.

ಇದು ಕೆಲವು ವಾರಗಳ ಹಿಂದೆ ನಡೆದಿದ್ದ ಪಾರ್ಟಿಯ ವೀಡಿಯೋ. ವೀಡಿಯೋ ರೆಕಾರ್ಡ್​ ಆಗ್ತಿದೆ ಎಂದು ನನಗೆ ಗೊತ್ತಿತ್ತು. ಆದರೆ ಆ ವೀಡಿಯೋ ಖಾಸಗಿಯಾಗಿಯೇ ಉಳಿಯುತ್ತದೆ ಎಂದು ಭಾವಿಸಿದ್ದೆ.

ನಾನು ಯಾವುದೇ ಮಾದಕ ದ್ರವ್ಯ ಸೇವಿಸಿಲ್ಲ. ಕೇವಲ ಆಲ್ಕೋಹಾಲ್​ನ್ನಷ್ಟೇ ಸೇವಿಸಿದ್ದೇನೆ. ಕಾನೂನು ಪ್ರಕಾರವಾಗಿಯೇ ಪಾರ್ಟಿ ಮಾಡಿದ್ದೇನೆ. ಆದರೆ ವೀಡಿಯೋ ಬಹಿರಂಗ ಆಗಿದ್ದರಿಂದ ಬೇಸರವಾಗಿದೆ

ಎಂದು ಸನ್ನಾ ಮರಿನ್​ ಹೇಳಿದ್ದಾರೆ.

2011ರಲ್ಲಿ ತಮ್ಮ ಸರ್ಕಾರದ ವಿದೇಶಾಂಗ ಸಚಿವರಿಗೆ ಕೋವಿಡ್​ ದೃಢಪಟ್ಟ ಬಳಿಕ ನೈಟ್​ಕ್ಲಬ್​ನಲ್ಲಿ ಪಾರ್ಟಿ ಮಾಡಿ ವಿವಾದಕ್ಕೀಡಾಗಿದ್ದ ಸನ್ನಾ ಮರಿನ್​ ಬಳಿಕ ಕ್ಷಮೆ ಕೇಳಿದ್ದರು.

LEAVE A REPLY

Please enter your comment!
Please enter your name here