ಕೇಂದ್ರ ಸರ್ಕಾರದ ಮಟ್ಟದಲ್ಲಿ ಮಹತ್ವದ ಬೆಳವಣಿಗೆಗಳು ಕಂಡುಬರುತ್ತಿವೆ. ಕೇಂದ್ರ ಕಾನೂನು ಮಂತ್ರಿಗಳನ್ನು ಬದಲಾಯಿಸಲಾಗಿದೆ.
ಹಾಲಿ ಕೇಂದ್ರ ಕಾನೂನು ಮಂತ್ರಿಗಳಾಧ ಕಿರಣ್ ರಿಜಿಜು ಅವರ ಖಾತೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಬದಲಿಸಿದ್ದಾರೆ.
ಕಿರಣ್ ರಿಜಿಜು ಅವರ ಸ್ಥಾನದಲ್ಲಿ ಅರ್ಜುನ್ ರಾಮ್ ಮೇಘವಾಲ್ ಅವರನ್ನು ಕಾನೂನು ಸಚಿವರನ್ನಾಗಿ ಮಾಡಲಾಗಿದೆ.
ಕಿರಣ್ ರಿಜಿಜು ಅವರನ್ನು ಅರ್ತ್ ಸೈನ್ಸ್ ಇಲಾಖೆ ಸಚಿವರನ್ನಾಗಿ ಮಾಡಲಾಗಿದೆ ಎಂದು ಲಾ ಟುಡೇ ವರದಿ ಮಾಎಇ.
ಕಿರಣ್ ರಿಜಿಜು ಮತ್ತು ಅರ್ಜುನ್ ರಾಮ್ ಮೇಘವಾಲ್ ಶೀಘ್ರದಲ್ಲೇ ತಮ್ಮ ಹೊಸ ಖಾತೆಗಳನ್ನು ವಹಿಸಿಕೊಳ್ಳಲಿದ್ದಾರೆ.