KRITHI SHETTY: ಪ್ಲಾಸ್ಟಿಕ್ ಸರ್ಜರಿ ಮೊರೆ ಹೋದರಾ ನಟಿ ಕೃತಿ ಶೆಟ್ಟಿ

ಉಪ್ಪೆನ ಸಿನಿಮಾ ಮೂಲಕ ಟಾಲಿವುಡ್​ಗೆ ಪರಿಚಯವಾದ ಮಂಗಳೂರು ಬೆಡಗಿ ಕೃತಿ ಶೆಟ್ಟಿಗೆ ಓವರ್​ನೈಟ್ ಸ್ಟಾರ್​ಡಮ್ ಸಿಕ್ಕಿದೆ.

ಮೊದಲ ಸಿನಿಮಾನೇ ಬ್ಲಾಕ್ ಬಸ್ಟರ್ ಆದ ಹಿನ್ನೆಲೆಯಲ್ಲಿ ಊಹಿಸದೇ ಇರುವ ರೀತಿ ಪಾಪುಲಾರಿಟಿ ಗಳಿಸಿಕೊಂಡ ನಟಿ ಕೃತಿ ಶೆಟ್ಟಿ ಹ್ಯಾಟ್ರಿಕ್ ಹಿಟ್ಸ್ ಮೂಲಕ ಭಾರೀ ಸದ್ದು ಮಾಡಿದ್ದರು.

ಆದರೆ, ನಂತರ ಅದೇನಾಯ್ತೋ ಗೊತ್ತಿಲ್ಲ. ಸತತ ಫ್ಲಾಪ್​ಗಳು ಕೃತಿ ಶೆಟ್ಟಿಯನ್ನು ಬೆಂಬಿಡದೇ ಕಾಡಲು ಶುರು ಮಾಡಿದವು.

ಕೃತಿ ಶೆಟ್ಟಿ ಕೊನೆಯದಾಗಿ ನಟಿಸಿದ ನಾಲ್ಕು ಸಿನಿಮಾಗಳು ಡಿಸಾಸ್ಟರ್ ಲಿಸ್ಟ್ ಸೇರಿದ ಕಾರಣ ಮಂಗಳೂರು ಬೆಡಗಿಯ ಕೆರಿಯರ್ ಡೋಲಾಯಮಾನವಾದಂತಿದೆ.

ಒಂದು ಕಡೆ ಸತತ ಫ್ಲಾಪ್​ಗಳಿಂದ ಕುಗ್ಗಿರುವ ಕೃತಿ ಶೆಟ್ಟಿ ಮತ್ತೊಂದು ಕಡೆ ಟ್ರೋಲ್​ಗೆ ಒಳಗಾಗುತ್ತಿದ್ದಾರೆ. ನೆಟ್ಟಿಗರ ವಿಮರ್ಶೆಗೆ ಗುರಿಯಾಗುತ್ತಿದ್ದಾರೆ.

ಈ ಸಂದರ್ಭದಲ್ಲಿ ಕೃತಿ ಶೆಟ್ಟಿ ಮುಖದಲ್ಲಿ ಬದಲಾವಣೆ ಕಂಡುಬರುತ್ತಿವೆ. ಆಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಕೊಂಡಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

ಈ ರೂಮರ್ಸ್ ಬಗ್ಗೆ ಸ್ಪಂದಿರುವ ನಟಿ ಕೃತಿ ಶೆಟ್ಟಿ, ಇಂತಹ ಸುದ್ದಿಗಳನ್ನು ಯಾರು ಬೆರೆಯುತ್ತಾರೋ? ಏಕೆ ಬರೆಯುತ್ತಾರೋ ಅರ್ಥ ಆಗುತ್ತಿಲ್ಲ. ನಮಗೂ ಕೂಡ ಕುಟುಂಬವಿಎ.. ಇಂತಹ ರೂಮರ್ಸ್ ಕೇಳಿಸಿಕೊಂಡಾಗ ನೋವಾಗುತ್ತದೆ. ಉಪ್ಪೇನ ಸಿನಿಮಾದಲ್ಲಿ ಇದದ್ಂತೆ ಹೀಗಿಲ್ಲ ಎನ್ನುತ್ತಿದ್ದಾರೆ. ಯಾವಾಗಲೂ ಒಂದೇ ರೀತಿ ಇರಲು ಯಾರಿಗೂ ಸಾಧ್ಯವಿಲ್ಲ. ಫೀಚರ್ಸ್ ಬದಲಾಗುತ್ತಿರುತ್ತವೆ. ಎಲ್ಲರಂತೆಯೇ ನಾನು ಸಹ. ಕೆಲವೊಮ್ಮೆ ಮೇಕಪ್, ಹೇರ್ ಸ್ಟೈಲ್​ನಿಂದ ಕೂಡ ಬದಲಾವಣೆಗಳು ಕಾಣಿಸುತ್ತವೆ. ಅಷ್ಟು ಮಾತ್ರಕ್ಕೆ ಪ್ಲಾಸ್ಟಿಕ್ ಸರ್ಜರಿ ಅಂತಾ ಗರಂ ಆಗಿದ್ದಾರೆ.