9 ಭಾಷೆಗಳಲ್ಲಿ NDTV ಚಾನೆಲ್​ ಆರಂಭಕ್ಕೆ ನಿರ್ಧಾರ

Adani buys NDTV

ಗುಜರಾತ್​ ಮೂಲದ ಗೌತಮ್​ ಅದಾನಿ ಮಾಲೀಕತ್ವದ ಎನ್​ಡಿಟಿವಿ ತನ್ನ ನೆಟ್​ವರ್ಕ್​ ವಿಸ್ತರಣೆಗೆ ತೀರ್ಮಾನಿಸಿದೆ.

ಭಾರತದ 9 ಭಾಷೆಗಳಲ್ಲಿ ಎನ್​ಡಿಟಿವಿ ತನ್ನ ಚಾನೆಲ್​ಗಳನ್ನು ಆರಂಭಿಸುವ ಬಗ್ಗೆ ನಿರ್ಧಾರ ಕೈಗೊಂಡಿದೆ.

ಮೇ 17ರಂದು ನಡೆದ ಎನ್​ಡಿಟಿವಿ ನಿರ್ದೇಶಕರ ಮಂಡಳಿ ಸಭೆಯಲ್ಲಿ 9 ಚಾನೆಲ್​ಗಳನ್ನು ಆರಂಭಿಸಲು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅನುಮತಿ ಕೇಳುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.

ಸಚಿವಾಲಯದಿಂದ ಅನುಮತಿ ಸಿಕ್ಕ ಬಳಿಕ ಚಾನೆಲ್​ಗಳನ್ನು ಯಾವ ದಿನದಿಂದ ಆರಂಭಿಸಲಾಗುತ್ತದೆ ಎಂಬ ಬಗ್ಗೆ ಮಾಹಿತಿ ನೀಡುವುದಾಗಿ ಸೆಬಿ (ಭಾರತೀಯ ಷೇರು ನಿಯಂತ್ರಣ ಮಂಡಳಿ)ಗೆ ಸಲ್ಲಿಸಿದ ದಾಖಲೆಯಲ್ಲಿ ಎನ್​ಡಿಟಿವಿ ಹೇಳಿದೆ.