ಬೆಂಗಳೂರಲ್ಲಿ ಮಳೆ – ಕಾರಲ್ಲೇ ಮೃತಪಟ್ಟ ಮಹಿಳೆಗೆ 5 ಲಕ್ಷ ಪರಿಹಾರ – ರಾಜಕಾಲುವೆ ಒತ್ತುವರಿ ತೆರವು ಮತ್ತೆ ಆರಂಭ

ಬೆಂಗಳೂರಲ್ಲಿ ಮಳೆ ನೀರಲ್ಲಿ ಕಾರು ಸಿಲುಕಿಕೊಂಡು ಮೃತಪಟ್ಟ ಭಾನುರೇಖಾ ಕುಟುಂಬಕ್ಕೆ ರಾಜ್ಯ ಸರ್ಕಾರ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ.

ಬೆಂಗಳೂರಿನ ಸೆಂಟ್​ ಮಾರ್ಥಾಸ್​ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಮಾತಾಡಿದ ಸಿಎಂ ಸಿದ್ದರಾಮಯ್ಯ ಪರಿಹಾರ ನೀಡುವ ಘೋಷಣೆ ಮಾಡಿದರು.

ಭಾನುರೇಖಾ ಅವರು ಇನ್ಫೋಸಿಸ್​ನಲ್ಲಿ ಉದ್ಯೋಗಿ ಆಗಿದ್ದರು.

ಬೆಂಗಳೂರಿನ ಕೆ ಆರ್​ ಸರ್ಕಲ್​ ಅಂಡರ್​ಪಾಸ್​ನಲ್ಲಿ ಎರಡು ಕಡೆಯಿಂದ ಮಳೆ ನೀರು ನುಗ್ಗಿದ್ದರಿಂದ ಕಾರಿನ ಬಾಗಿಲು ತೆಗೆಯಲಾಗದೇ ಭಾನುರೇಖಾ ಮೃತಪಟ್ಟಿದ್ದರು.

ಅವರ ಜೊತೆಗೆ ಕಾರಿನಲ್ಲಿದ್ದ ಉಳಿದ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಿಜೆಪಿ ಸರ್ಕಾರದಲ್ಲಿ ರಾಜಕಾಲುವೆ ಒತ್ತುವರಿ ಸ್ಥಗಿತವಾಗಿತ್ತು. ನಮ್ಮ ಸರ್ಕಾರ ರಾಜಕಾಲುವೆ ಒತ್ತುವರಿ ತೆರವಿಗೆ ಮತ್ತೆ ಕ್ರಮ ಆರಂಭಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.