ಇದೇ ವರ್ಷದ ಅಕ್ಟೋಬರ್ನಲ್ಲಿ ಸಂಚಾರಕ್ಕೆ ಮುಕ್ತ ಆಗಲಿರುವ ಬೆಂಗಳೂರು-ಮೈಸೂರು ನಡುವಿನ 10 ಮಾರ್ಗಗಳ ರಾಷ್ಟಿçÃಯ ಹೆದ್ದಾರಿ ಲೋಕಾರ್ಪಣೆ ಆಗಲಿದೆ. ಆದರೆ ವಿಷಯ ಅದಲ್ಲ.
ಈ ಹೊಸ ಹೆದ್ದಾರಿಯಲ್ಲಿ 117 ಕಿಲೋ ಮೀಟರ್ ದೂರದ ಪ್ರಯಾಣಕ್ಕೆ ವಾಹನ ಸವಾರರು 200 ರೂ.ಗಳಿಂದ 250 ರೂಪಾಯಿವರೆಗೆ ಟೋಲ್ ಕಟ್ಟಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ದಶಪಥದ ಮೊದಲ ಹಂತದ ಭಾಗವಾಗಿ ಬೆಂಗಳೂರು-ನಿಡಘಟ್ಟವರೆಗಿನ ಮಾರ್ಗ ಜುಲೈ ವೇಳೆಗೆ ಸಾರ್ವಜನಿಕ ಸಂಚಾರಕ್ಕೆ ಮುಕ್ತಾಯ ಆಗಲಿದೆ. ನಿಡಘಟ್ಟದಿಂದ ಮೈಸೂರುವರೆಗಿನ ದಶಪಥ ರಸ್ತೆ ದಸರಾ ಹಬ್ಬದ ವೇಳೆಗೆ ಸಂಚಾರಕ್ಕೆ ಮುಕ್ತಾಯವಾಗಲಿದೆ.
117 ಕಿಲೋ ಮೀಟರ್ ದೂರದ ಹತ್ತು ಮಾರ್ಗಗಳ ರಾಷ್ಟಿçÃಯ ಹೆದ್ದಾರಿ ನಿರ್ಮಾಣಕ್ಕೆ 8,350 ಕೋಟಿ ರೂಪಾಯಿ ವೆಚ್ಚ ಆಗಿದೆ. ಈಗಾಗಲೇ ಟೋಲ್ ಸಂಗ್ರಹಕ್ಕಾಗಿ ಟೋಲ್ ಪ್ಲಾಜಾಗಳನ್ನು ನಿರ್ಮಿಸಲಾಗಿದೆ.
ಗನಗೂರು, ಕಣಮಿನಿಕೆ ಬಳಿ ಟೋಲ್ ಪ್ಲಾಜಾಗಳನ್ನು ನಿರ್ಮಿಸಲಾಗಿದೆ. 60 ಕಿಲೋ ಮೀಟರ್ ವ್ಯಾಪ್ತಿಗೆ ಒಂದು ಟೋಲ್ ಪ್ಲಾಜಾ ಹಾಕಬಹುದು ಎಂದು ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದ ಮಾರ್ಗಸೂಚಿ ಹೇಳುತ್ತದೆ. ಪ್ರತಿ ಕಿಲೋ ಮೀಟರ್ಗೆ 1.5 ರೂ.ನಿಂದ 2 ರೂಪಾಯಿವರೆ ಟೋಲ್ ವಿಧಿಸಲಾಗುತ್ತದೆ.
ಹೆದ್ದಾರಿಯ ಪಥ ಸಂಖ್ಯೆ, ಸೇತುವೆಗಳು ಮತ್ತು ಅಂಡರ್ಪಾಸ್ಗಳನ್ನು ಆಧರಿಸಿ ಟೋಲ್ ವಿಧಿಸಲಾಗುತ್ತದೆ. 117 ಕಿಲೋ ಮೀಟರ್ ವ್ಯಾಪ್ತಿಯಲ್ಲಿ 9 ದೊಡ್ಡ ಸೇತುವೆಗಳು, 44 ಸಣ್ಣ ಸೇತುವೆಗಳು, 28 ಅಂಡರ್ಪಾಸ್ಗಳು, 13 ಲಘು ವಾಹನಗಳ ಅಂಡರ್ಪಾಸ್, 13 ಪಾದಾಚಾರಿ ಅಂಡರ್ಪಾಸ್, 8 ಮೇಲ್ಸೇತುವೆಗಳು ಮತ್ತು ಎರಡು ವಿಶ್ರಾಂತಿಧಾಮಗಳು ಬರಲಿವೆ.