ಬೆಂಗಳೂರಿನ ಅತ್ತಿಗುಪ್ಪೆಯಲ್ಲಿ 29 ವರ್ಷದ ಯುವಕ ಗೌತಮ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೌತಮ್ ಬಿಬಿಎಂಪಿ ಮಾಜಿ ಕಾರ್ಪೋರೇಟರ್ ದೊಡ್ಡಯ್ಯ ಅವರ ಮಗ.
ಗೌತಮ್ ಆತ್ಮಹತ್ಯೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಕನ್ನಡದ ಟಿವಿ ಸುದ್ದಿ ಮಾಧ್ಯಮಗಳು ಸರ್ಕಾರದಿಂದ ಕಾಮಗಾರಿಯ ಅನುದಾನ ಬಿಡುಗಡೆ ಆಗದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿ ಪ್ರಸಾರ ಮಾಡಿದ್ದವು.
ಗೌತಮ್ ಗುತ್ತಿಗೆದಾರ ಅಲ್ಲ:
ಆದರೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಗೌತಮ್ ಅವರ ಭಾವ:
ಗೌತಮ್ ಗುತ್ತಿಗೆದಾರನೇ ಅಲ್ಲ. ಅವರು ಯಾವುದೇ ಗುತ್ತಿಗೆ ಮಾಡುತ್ತಿರಲಿಲ್ಲ. ಆತನ ಬಳಿ ಪರವಾನಿಗೆಯೂ ಇರಲಿಲ್ಲ. ಇದೆಲ್ಲ ಬಿಜೆಪಿಯ ಸೃಷ್ಟಿ. ಅವನಿಗೆ ಮದುವೆ ಮಾಡುವ ತಯಾರಿ ನಡೆಸಿದ್ದೆವು, 2-3 ಕನ್ಯೆಗಳನ್ನೂ ನೋಡಿದ್ದೆವು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅವನು ಡಿಪ್ರೆಶನ್ಗೆ ಒಳಗಾಗಿದ್ದ
ಎಂದು ಮಾಹಿತಿ ನೀಡಿದ್ದಾರೆ.
ನನ್ನ ಮಗ ಗುತ್ತಿಗೆದಾರ ಅಲ್ಲ:
ನನ್ನ ಮಗ ಗುತ್ತಿಗೆದಾರ ಅಲ್ಲ, ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ನಮಗೂ ಗೊತ್ತಾಗುತ್ತಿಲ್ಲ ಎಂದು ಗೌತಮ್ ಅವರ ತಂದೆ ದೊಡ್ಡಯ್ಯ ಹೇಳಿದ್ದಾರೆ.
ಸುಳ್ಳು ಸುದ್ದಿ ಆಧರಿಸಿ ಬಿಜೆಪಿ ನಾಯಕರಿಂದ ಟ್ವೀಟ್:
ಗೌತಮ್ ಆತ್ಮಹತ್ಯೆ ಬಗ್ಗೆ ಕನ್ನಡದ ಟಿವಿ ಸುದ್ದಿವಾಹಿನಿಗಳು ಸುಳ್ಳು ಸುದ್ದಿ ಪ್ರಸಾರ ಮಾಡಿದ್ದನ್ನೇ ಆಧರಿಸಿ ಬಿಜೆಪಿ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನೇ ಟಾರ್ಗೆಟ್ ಮಾಡಿ ಟ್ವೀಟಿಸಿದರು. ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಜನಾಂದೋನದ ಎಚ್ಚರಿಕೆಯನ್ನೂ ನೀಡಿದರು.
ADVERTISEMENT
ADVERTISEMENT