ಲೋಕಸಭೆಯಲ್ಲಿ ಕಾಂಗ್ರೆಸ್ ಮಂಡಿಸಿದ್ದ ಅವಿಶ್ವಾಸ ನಿರ್ಣಯದ ಮೇಲೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸುದೀರ್ಘ ದಾಖಲೆಯ ಭಾಷಣ ಮಾಡಿದ್ದಾರೆ. 2 ಗಂಟೆ 13 ನಿಮಿಷ ಮಾತಾಡುವ ಮೂಲಕ ಲಾಲ್ ಬಹದ್ದೂರು ಶಾಸ್ತ್ರಿ ಅವರು ಮಾಡಿದ್ದ 2 ಗಂಟೆ 12 ನಿಮಿಷಗಳ ಭಾಷಣದ ದಾಖಲೆಯನ್ನು ಮುರಿದಿದ್ದಾರೆ.
ಆದರೆ ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ವೇಳೆ ಸ್ಪೀಕರ್ ಓಂ ಬಿರ್ಲಾ ಅವರು ನಿದ್ರೆ ಜಾರಿದ್ದ ವೀಡಿಯೋವನ್ನು ಕಾಂಗ್ರೆಸ್ ಹಂಚಿಕೊಂಡಿದೆ.
ಪ್ರಧಾನಿ ಅವರ ಭಾಷಣದ ವೇಳೆ ಮತ್ತೋರ್ವ ಬಿಜೆಪಿ ಸಂಸದ ಅಕ್ಷರಶಃ ನಿದ್ದೆ ಮಾಡಿದ್ದರು. ಅವರ ಪಕ್ಕದಲ್ಲೇ ಇದ್ದ ಮಹಿಳಾ ಸಂಸದರೊಬ್ಬರು ಅವರನ್ನು ಎಬ್ಬಿಸಿದರು.
ಗೃಹ ಸಚಿವ ಅಮಿತ್ ಶಾ ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು ಆಕಳಿಸುತ್ತಿದ್ದರು.
ADVERTISEMENT
ADVERTISEMENT