ಬಸವರಾಜ ಬೊಮ್ಮಾಯಿಯವರೇ ಇನ್ನೂ CM

CM Basavaraj Bommai

ವಿಧಾನಸಭಾ ಚುನಾವಣಾ ಫಲಿತಾಂಶ ಬಂದು ಒಂದು ತಿಂಗಳಾಗಿದೆ. ಫಲಿತಾಂಶ ಪ್ರಕಟವಾದ ದಿನವೇ ಮುಖ್ಯಮಂತ್ರಿ ಆಗಿದ್ದ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ರಾಜೀನಾಮೆ ನೀಡಿತ್ತು.

ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್​ ಸರ್ಕಾರ ಬಂದು ತಿಂಗಳಾಗುತ್ತ ಬರುತ್ತಿದೆ. ಆದರೆ ರಾಜ್ಯ ಸರ್ಕಾರದ ಪೋರ್ಟಲ್​ನಲ್ಲಿ ಇನ್ನೂ ಬೊಮ್ಮಾಯಿ ಅವರೇ ಮುಖ್ಯಮಂತ್ರಿಯಾಗಿ ಉಳಿದುಕೊಂಡಿದ್ದಾರೆ.

ರಾಜ್ಯ ಸರ್ಕಾರದ ಯೋಜನೆಗಳು ಮತ್ತು ಫಲಾನುಭವಿಗಳ ಬಗ್ಗೆ ಮಾಹಿತಿ ನೀಡುವ ಕರ್ನಾಟಕ ಮಾಹಿತಿ ಕಣಜ ಪೋರ್ಟಲ್​ನಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳು ಎಂದೇ ಇದೆ.

ಸರ್ಕಾರದ ಬದಲಾದ ಬಳಿಕ ಮುಖ್ಯಮಂತ್ರಿ ಮತ್ತು ಇಲಾಖಾ ಸಚಿವರ ಮಾಹಿತಿಗಳು ಬದಲಾಗುವುದು ನಿಯಮ. ಆದರೆ ಮಾಹಿತಿ ಕಣಜ ಪೋರ್ಟಲ್​ನಲ್ಲೇ ಮಾಹಿತಿ ಬದಲಾಗಿಲ್ಲ.