PAN-ಆಧಾರ್​ ಜೋಡಣೆಗೆ 16 ದಿನಗಳಷ್ಟೇ ಬಾಕಿ – ದಂಡ ಕಟ್ಟಿ ಜೋಡಿಸಿ

ಪ್ಯಾನ್​ ಕಾರ್ಡ್​ (Permanent Account Number)ಗೆ ಆಧಾರ್​ ಸಂಖ್ಯೆ ಜೋಡಣೆ ಮಾಡುವುದಕ್ಕೆ ಇದೇ ತಿಂಗಳು ಅಂದರೆ ಜೂನ್​ 30 ಕಡೆಯ ದಿನ.

ಮಾರ್ಚ್​ 31ರಂದು ಕಡೆಯ ದಿನವಾಗಿತ್ತು. ಆದರೆ ಆದಾಯ ತೆರಿಗೆ ಇಲಾಖೆಯ ಪೋರ್ಟಲ್​ನಲ್ಲಿ ತಾಂತ್ರಿಕ ಸಮಸ್ಯೆಗಳಿದ್ದ ಕಾರಣ ಜೋಡಣೆ ಅವಧಿಯನ್ನು ಮೂರು ತಿಂಗಳು ವಿಸ್ತರಣೆ ಮಾಡಲಾಯಿತು.

1 ಸಾವಿರ ರೂಪಾಯಿ ವಿಳಂಬ ಶುಲ್ಕದೊಂದಿಗೆ ಆಧಾರ್​ ಜೋಡಣೆ ಮಾಡಬೇಕಾಗುತ್ತದೆ.

ಜೂನ್​ 30ರೊಳಗೆ ಪ್ಯಾನ್​ಗೆ ಆಧಾರ್​ ಜೋಡಣೆ ಮಾಡದೇ ಹೋದರೆ ಜುಲೈ 1ರಿಂದ ಪ್ಯಾನ್​ ಕಾರ್ಡ್​ ನಿಷ್ಕ್ರಿಯ ಆಗಲಿದೆ

ಪ್ಯಾನ್​ ನಿಷ್ಕ್ರಿಯವಾದರೆ ಎಲ್ಲ ರೀತಿಯ ಬ್ಯಾಂಕಿಂಗ್​ ವ್ಯವಹಾರಗಳಿಗೆ ತೊಂದರೆ ಆಗಬಹುದು. ಸರ್ಕಾರದಿಂದ ಸಿಗುವ ಯೋಜನೆಯ ಲಾಭ ಪಡೆಯಲು ಅನಾನುಕೂಲ ಆಗಬಹುದು.

ಉದಾಹರಣೆಗೆ ಕರ್ನಾಟಕದಲ್ಲಿ ಜಾರಿ ಆಗಲಿರುವ ಗೃಹ ಲಕ್ಷ್ಮೀ ಮತ್ತು ಯುವ ನಿಧಿ ಯೋಜನೆಗೆ ಬ್ಯಾಂಕ್​ ದಾಖಲೆ ಮತ್ತು ಆಧಾರ್​ ಮಾಹಿತಿ ಕೊಡುವುದು ಕಡ್ಡಾಯ.

ಒಂದು ವೇಳೆ ಪ್ಯಾನ್ ನಿಷ್ಕ್ರಿಯವಾದರೆ ಆಗ ಬ್ಯಾಂಕ್​ ಖಾತೆಗಳಿಗೂ ತೊಂದರೆ ಆಗಲಿದೆ.

ಒಬ್ಬ ವ್ಯಕ್ತಿ ತಮ್ಮ ಹೆಸರಲ್ಲಿ ಒಂದಕ್ಕಿಂತ ಹೆಚ್ಚು ಪ್ಯಾನ್​ ಕಾರ್ಡ್​ ಹೊಂದಿರುವುದು ಗೊತ್ತಾದರೆ ಅವರಿಗೆ 10 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ.