BJP MP: ಬಿಜೆಪಿ ಸಂಸದನಿಂದ ಸಾಲ ಬಾಕಿ – ಹರಾಜು ನೋಟಿಸ್​ ವಾಪಸ್​ ಪಡೆದ ಸರ್ಕಾರಿ ಬ್ಯಾಂಕ್​..!

ಸಾಲ ಪಾವತಿಸಲು ವಿಫಲರಾದ ಹಿನ್ನೆಲೆಯಲ್ಲಿ ಬಿಜೆಪಿ ಸಂಸದ ಮತ್ತು ನಟ ಸನ್ನಿ ಡಿಯೋಲ್​ಗೆ ಸೇರಿದ ಮುಂಬೈನಲ್ಲಿರುವ ಬಂಗಲೆಯನ್ನು ಹರಾಜು ಹಾಕುವುದಾಗಿ ಹೊರಡಿಸಿದ್ದ ಪ್ರಕಟಣೆಯನ್ನು ಪ್ರಕಟಣೆ ಹೊರಡಿಸಿದ 24 ಗಂಟೆಗಳಲ್ಲೇ ಬ್ಯಾಂಕ್​ ವಾಪಸ್​ ಪಡೆದಿದೆ.

ತಾಂತ್ರಿಕ ಕಾರಣದಿಂದ ಹರಾಜು ನೋಟಿಸ್​​ನ್ನು ವಾಪಸ್​ ಪಡೆದಿರುವುದಾಗಿ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್​ ಆಫ್​ ಬರೋಡಾ ಹೇಳಿದೆ. ಬ್ಯಾಂಕ್​ ಆಫ್​ ಬರೋಡಾಗೆ ಅಜಯ್​ ಸಿಂಗ್​ ಡಿಯೋಲ್​ ಅಲಿಯಾಸ್​ ಸನ್ನಿ ಡಿಯೋಲ್​ 56 ಕೋಟಿ ರೂಪಾಯಿ ಸಾಲ ಬಾಕಿ ಉಳಿಸಿಕೊಂಡಿದ್ದರು.

ಬಾಕಿ ಸಾಲ ವಸೂಲಿ ಸಂಬಂಧ ಮುಂಬೈನ ಜುಹುನಲ್ಲಿರುವ ಬಂಗಲೆಯನ್ನು ಸೆಪ್ಟೆಂಬರ್​ 25ರಂದು ಹರಾಜು ಹಾಕುವುದಾಗಿ ಬ್ಯಾಂಕ್​ ಆಫ್​ ಬರೋಡಾ ಆಗಸ್ಟ್​ 19ರಂದು ಪ್ರಮುಖ ದೈನಿಕ ಟೈಮ್ಸ್​ ಆಫ್​ ಇಂಡಿಯಾದ ಮುಂಬೈ ಆವೃತ್ತಿಯಲ್ಲಿ ಹರಾಜು ನೋಟಿಸ್​ ಪ್ರಕಟಿಸಿತ್ತು.

LEAVE A REPLY

Please enter your comment!
Please enter your name here