ಆರ್ ಎಸ್ ಎಸ್ ಸಂಸ್ಥಾಪಕ ಕೇಶವ ಬಲಿರಾಂ ಹೆಡ್ಗೆವಾರ್ ಮ್ಯೂಸಿಯಂಗೆ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಗೆ ಪ್ರವೇಶಕ್ಕೆ ನೀಷೇಧಿಸಿದ್ದಾರೆ. ಹೀಗಾಗಿ ಸಂಘಪರಿವಾರದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಿದೆಯೇ? ಎಂಬ ಪ್ರಶ್ನೆ ಎದ್ದಿದೆ.
ಇನ್ನು ಗೂಳಿಹಟ್ಟಿ ಶೇಖರ್ ಬೇಸರಗೊಂಡು ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಬಿ.ಎಲ್ ಸಂತೋಷ್ ಗೆ ಆಡಿಯೊವನ್ನು ಕಳಿಸಿದ್ದು, ಇದೀಗ ಎಲ್ಲೆಡೆ ವೈರಲ್ ಆಗಿದೆ.
ವಿಧಾನಸಭೆ ಚುನಾವಣೆಗೂ ಮೊದಲು ಗೂಳಿಹಟ್ಟಿ ಶೇಖರ್ ನಾಗ್ಪುರಕ್ಕೆ ಭೇಟಿ ನೀಡಿದ್ದರು. ಆರ್ ಎಸ್ ಎಸ್ ಸ್ವಯಂ ಸೇವಕ ಮೋಹನ್ ಜಿ ವೈದ್ಯ ಜೊತೆ ನಾಗ್ಪುರಕ್ಕೆ ಶೇಖರ್ ತೆರಳಿದ್ದರು. ಈ ವೇಳೆ ಮ್ಯೂಸಿಯಂಗೆ ಪ್ರವೇಶ ನಿಷೇಧಿಸಿದ್ದಾರೆ. ಹೀಗಾಗಿ ಸಂಘಪರಿವಾರದಲ್ಲಿ ಈ ಆಚರಣೆ ಬಗ್ಗೆ ಸ್ಪಷ್ಟನೆ ನೀಡುವಂತೆ ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲದೆ ಆರ್ ಎಸ್ ಎಸ್ ಹಾಗೂ ಬಿಜೆಪಿ ನಾಯಕರ ವಿರುದ್ಧ ಗೂಳಿಹಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.