ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಮತ್ತು ಅವರ ಕೂಟ ಲಿಂಗಾಯತ ವಿರೋಧಿ ಎಂದು ಆರೋಪಿಸಿರುವ ಕಾಂಗ್ರೆಸ್ ಆ ಸಂಬಂಧ ವೀಡಿಯೋ ಮತ್ತು ಸರಣಿ ಟ್ವೀಟ್ಗಳನ್ನು ಪ್ರಕಟಿಸಿದೆ.
ಬಿಜೆಪಿಯಲ್ಲಿ @BSYBJP ಗೆ ಅಪಮಾನ ಇದೇ ಮೊದಲಲ್ಲ. ಬಿಜೆಪಿಯಲ್ಲಿ ಯಡಿಯೂರಪ್ಪ ವಿರೋಧಿ ‘ಸಂತೋಷ ಕೂಟ’ ಮೊದಲಿಂದಲೂ ಇದೆ. ಈ ‘ಸಂತೋಷ ಕೂಟ’ ಬಿಜೆಪಿಯಲ್ಲಿ ಯಡಿಯೂರಪ್ಪರಿಗೆ ಅಧಿಕಾರ ಸಿಗದಂತೆ ಮಾಡಲು, ಅಧಿಕಾರದಿಂದ ಇಳಿಸಲು, ಮೂಲೆಗುಂಪು ಮಾಡಲು ಕೊನೆಗೆ ಜೈಲಿಗೆ ಕಳುಹಿಸುವಲ್ಲಿಯೂ ಸಕ್ರಿಯ ಪಾತ್ರ ವಹಿಸಿದೆ.
ಬಿಜೆಪಿಯಲ್ಲಿ @BSYBJP ಗೆ ಅಪಮಾನ ಇದೇ ಮೊದಲಲ್ಲ.
ಬಿಜೆಪಿಯಲ್ಲಿ ಯಡಿಯೂರಪ್ಪ ವಿರೋಧಿ 'ಸಂತೋಷ ಕೂಟ' ಮೊದಲಿಂದಲೂ ಇದೆ.ಈ 'ಸಂತೋಷ ಕೂಟ' ಬಿಜೆಪಿಯಲ್ಲಿ ಯಡಿಯೂರಪ್ಪರಿಗೆ ಅಧಿಕಾರ ಸಿಗದಂತೆ ಮಾಡಲು, ಅಧಿಕಾರದಿಂದ ಇಳಿಸಲು, ಮೂಲೆಗುಂಪು ಮಾಡಲು ಕೊನೆಗೆ ಜೈಲಿಗೆ ಕಳುಹಿಸುವಲ್ಲಿಯೂ ಸಕ್ರಿಯ ಪಾತ್ರ ವಹಿಸಿದೆ. #BSYvsBJP pic.twitter.com/THffC6oJfx
— Karnataka Congress (@INCKarnataka) March 18, 2023
ದಶಕಗಳ ಕಾಲದ ಹೋರಾಟದಿಂದ ಬಿಜೆಪಿಯನ್ನು ಅಧಿಕಾರಕ್ಕೆ ತಂದು 'ಮುಖ್ಯಮಂತ್ರಿ' ಹುದ್ದೆಗೆ ಏರಿದವರು ಯಡಿಯೂರಪ್ಪ. ಆದರೆ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಲು 'ಸಂಚು' ನಡೆಸಿ ಅದರಲ್ಲಿ ಎರಡೆರಡು ಬಾರಿ ಯಶಸ್ವಿಯೂ ಆಗಿದ್ದು ಬಿಜೆಪಿಯಲ್ಲಿರುವ ಇದೇ 'ಸಂತೋಷ ಕೂಟ'#BSYvsBJP pic.twitter.com/dVa9gf0meK
— Karnataka Congress (@INCKarnataka) March 18, 2023
2018ರ ಚುನಾವಣೆಯಲ್ಲಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ವರುಣಾ ಕ್ಷೇತ್ರದಿಂದ ಸ್ಪರ್ದಿಸಲು ತಯಾರಿ ನಡೆಸಿದ್ದರು. ಇದಕ್ಕೆ ಕಾರ್ಯಕರ್ತರ ಬೆಂಬಲವೂ ಇತ್ತು. ಆದರೆ ಕೊನೇ ಕ್ಷಣದಲ್ಲಿ ಇದಕ್ಕೆ ಹೈಕಮಾಂಡ್ ಒಪ್ಪಿಗೆ ನೀಡಲಿಲ್ಲ. ಇದರ ಹಿಂದೆ ಇದ್ದದ್ದು ಇದೇ 'ಸಂತೋಷ ಕೂಟ'ದ ಕೈವಾಡ. #BSYvsBJP pic.twitter.com/DZezWOuApq
— Karnataka Congress (@INCKarnataka) March 18, 2023