ಸೂಪರ್​​ಸ್ಟಾರ್​ ರಜಿನಿಕಾಂತ್​ ಮಗಳ ಮನೆಯಲ್ಲಿ ಆಭರಣ ಕಳ್ಳತನ – ಮನೆ ಕೆಲಸದಾಕೆ ಅರೆಸ್ಟ್​

ಸೂಪರ್​ಸ್ಟಾರ್​ ರಜಿನಿಕಾಂತ್​ ಮಗಳು ಐಶ್ವರ್ಯ ರಜಿನಿಕಾಂತ್​ ಮನೆಯಲ್ಲಿ ಆಭರಣ ಕಳ್ಳತನ ಸಂಬಂಧ ಮಹಿಳೆಯೊಬ್ಬಾಕೆಯನ್ನು ಬಂಧಿಸಲಾಗಿದೆ.

40 ವರ್ಷದ ಈಶ್ವರಿ ಎಂಬಾಕೆಯನ್ನು ಬಂಧಿಸಲಾಗಿದೆ.

ಈಕೆ ಐಶ್ವರ್ಯ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು.

ಈಕೆಯ ಬ್ಯಾಂಕ್​ ಖಾತೆಯನ್ನು ಪರಿಶೀಲಿಸಿದಾಗ ಆಭರಣ ಕಳ್ಳತನ ಮಾಡಿರುವ ಬಗ್ಗೆ ಗೊತ್ತಾಗಿದೆ.

42 ಗ್ರಾಂನ್ನಷ್ಟು ಬಂಗಾರದ ಆಭರಣ, ವಜ್ರದ ಆಭರಣಗಳು ಮತ್ತು ನವರತ್ನಗಳನ್ನು ಕಳ್ಳತನ ಮಾಡಲಾಗಿತ್ತು.

ಆಭರಣಗಳನ್ನು ಲಾಕರ್​ನಲ್ಲಿ ಇಟ್ಟಿದ್ದರ ಬಗ್ಗೆ ಮನೆ ಕೆಲಸದಾಕೆ ಈಶ್ವರಿ, ಲಕ್ಷ್ಮೀ ಮತ್ತು ಕಾರು ಚಾಲಕ ವೆಂಕಟ್​ ಅವರಿಗೆ ತಿಳಿದಿತ್ತು. ನಾನು ಇಲ್ಲದ ವೇಳೆಯೂ ಮನೆಗೆ ಭೇಟಿ ನೀಡಿದ್ದರು.

ಕಳೆದ ಬಾರಿ ಲಾಕರ್​ ಓಪನ್​ ಮಾಡಿದಾಗ ಕೆಲವೊಂದು ಆಭರಣಗಳು ನಾಪತ್ತೆಯಾಗಿದ್ದವು. ಹೀಗಾಗಿ ನನಗೆ ಈ ಮೂವರ ಮೇಲೆ ಅನುಮಾನ ಇದೆ

ಎಂದು ಹೇಳಿ ಐಶ್ವರ್ಯ ಅವರು ಚೆನ್ನೈನ ತೇನಂಪೇಟೆ ಪೊಲೀಸರಿಗೆ ದೂರು ನೀಡಿದ್ದರು.