BREAKING: ಉತ್ತರ ಭಾರತ, ಪಾಕಿಸ್ತಾನದಲ್ಲಿ ಭಾರೀ ಭೂಕಂಪನದ ಅನುಭವ

ದೆಹಲಿ ಒಳಗೊಂಡಂತೆ ಉತ್ತರ ಭಾರತದಲ್ಲಿ ಮತ್ತು ನೆರೆಯ ಪಾಕಿಸ್ತಾನದಲ್ಲಿ ಭಾರೀ ಭೂಕಂಪನ ಸಂಭವಿಸಿದೆ.

ಮಾಹಿತಿಗಳ ಪ್ರಕಾರ ರಿಕ್ಟರ್​ ಮಾಪಕದಲ್ಲಿ ಭೂಕಂಪದ ತೀವ್ರತೆ 6.6ರಷ್ಟು ದಾಖಲಾಗಿದೆ. 

ಅಫ್ಘಾನಿಸ್ತಾನದ ಕಲ್ಫಾಘಾನ್​ನಲ್ಲಿ ಭೂಕಂಪನದ ಕೇಂದ್ರಬಿಂದು.

ಭಾರತ, ಪಾಕಿಸ್ತಾನ, ತುರ್ಕುಮೆನಿಸ್ತಾನ್​, ತಜಕಿಸ್ತಾನ್​, ಕಜಕಿಸ್ತಾನ್​, ಉಜ್ಬೇಕಿಸ್ತಾನ್​, ಚೀನಾ, ಅಫ್ಘಾನಿಸ್ತಾನ ಮತ್ತು ಕಿರ್ಗಿಸ್ತಾನದಲ್ಲಿ ಭೂಕಂಪನದ ಅನುಭವವಾಗಿದೆ.