Afghanistan : ರಷ್ಯಾದ ರಾಯಭಾರಿ ಕಚೇರಿಯಲ್ಲಿ ಆತ್ಮಹತ್ಯಾ ಬಾಂಬ್ ದಾಳಿ, 20 ಜನ ಸಾವು

Afghanistan

ಅಫ್ಘಾನಿಸ್ತಾನದ (Afghanistan ) ರಾಜಧಾನಿ ಕಾಬೂಲ್‌ನಲ್ಲಿರುವ ರಷ್ಯಾದ ರಾಯಭಾರ ಕಚೇರಿಯ ಬಳಿ ಸೋಮವಾರ ಭಾರೀ ಸ್ಫೋಟ ಸಂಭವಿಸಿದೆ.  ಈ ದುರ್ಘಟನೆಯಲ್ಲಿ ರಷ್ಯಾದ ಇಬ್ಬರು ರಾಜತಾಂತ್ರಿಕರು ಸಾವನ್ನಪ್ಪಿದ್ದಾರೆ. 11 ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಜನರು ವೀಸಾಕ್ಕಾಗಿ ರಾಯಭಾರ ಕಚೇರಿಯ ಹೊರಗಡೆ ಗೇಟ್ ಬಳಿ ನಿಂತಿದ್ದಾಗ ಸ್ಫೋಟ ಸಂಭವಿಸಿದೆ. ಈಗಾಗಲೇ ಇಬ್ಬರು  ಸಾವನ್ನಪ್ಪಿದ್ದು, 11 ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ : ಪಾಕಿಸ್ತಾನ: ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಮೂವರು ಮಕ್ಕಳು, ಯೋಧರು ಸಾವು

ಆತ್ಮಹತ್ಯಾ ಬಾಂಬರ್‌ನಿಂದಾಗಿ ಸ್ಫೋಟ ಸಂಭವಿಸಿದೆ. ದಾಳಿಗೂ ಮೊದಲೇ ಆತ್ಮಹತ್ಯಾ ಬಾಂಬರ್‌ನನ್ನು ತಾಲಿಬಾನ್ ಗಾರ್ಡ್‌ಗಳು ಗುರುತಿಸಿದ್ದರು. ಅವರು ಗುಂಡು ಹಾರಿಸುತ್ತಿದ್ದಂತೆಯೇ ಆತ್ಮಹತ್ಯಾ ಬಾಂಬರ್ ತನ್ನ ಬಳಿಯಿದ್ದ ಸ್ಫೋಟಕ ಸಾಧನವನ್ನು ಸಕ್ರಿಯಗೊಳಿಸಿದ್ದಾನೆ ಎನ್ನಲಾಗಿದೆ.

ಕೇವಲ 2 ದಿನಗಳ ಹಿಂದೆಯಷ್ಟೇ ವಾಯುವ್ಯ ಅಫ್ಘಾನಿಸ್ತಾನದ (Afghanistan ) ಹೆರಾತ್ ನಗರದ ಗುಜರ್ಗಾ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆಯ ವೇಳೆ ಬಾಂಬ್ ಸ್ಫೋಟ ಸಂಭವಿಸಿ 20 ಜನರು ಸಾವನ್ನಪ್ಪಿದ್ದರು.  ಇದನ್ನೂ ಓದಿ : BREAKING NEWS: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಮಸೀದಿಯಲ್ಲಿ ಬಾಂಬ್ ಸ್ಫೋಟ – ಹಲವರ ಸಾವು

LEAVE A REPLY

Please enter your comment!
Please enter your name here