ಬಿಜೆಪಿ ಸಂಸದೆಯ ಆಪ್ತನ ಮೇಲೆ ಗುಂಡಿನ ದಾಳಿ ಮಾಡಿ ಭೀಕರ ಹತ್ಯೆ

Ranjeeta Koli

ರಾಜಸ್ಥಾನದ ಭರತ್​ಪುರದಲ್ಲಿ ಬಿಜೆಪಿ ಸಂಸದೆ ರಂಜಿತಾ ಕೊಲಿ (Ranjeeta Koli) ಅವರ ಆಪ್ತನನ್ನು ಗುಂಡಿನ ಮಳೆ ಸುರಿಸಿ ಹತ್ಯೆ ಮಾಡಲಾಗಿದೆ.

ರಂಜಿತಾ ಕೊಲಿ ಅವರ ಆಪ್ತ ಎನ್ನಲಾದ ಕೃಪಾಲ್ ಸಿಂಗ್​(40)ರನ್ನು ಭಾನುವಾರ ರಾತ್ರಿ ಹತ್ಯೆ ಮಾಡಲಾಗಿದೆ.

ಕೃಪಾಲ್ ಅವರು ಭಾನುವಾರ 10.45 ಕ್ಕೆ ಸರ್ಕಾರಿ ಪರಿವೀಕ್ಷಣಾ ಮಂದಿರದಿಂದ ಕಾರಿನಲ್ಲಿ ಮನೆಗೆ ತೆರಳುತ್ತಿದ್ದಾಗ ಅವರನ್ನು ಬೈಕ್‌ನಲ್ಲಿ ಹಿಂಬಾಲಿಸಿದ ಸುಮಾರು 12 ಕ್ಕೂ ಹೆಚ್ಚು ಅಪರಿಚಿತ ದುಷ್ಕರ್ಮಿಗಳು ಅವರ ಮೇಲೆ ಜಗಿನಾ ಎಂಬಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಕೃಪಾಲ್ ಅವರಿಗೆ 7 ಗುಂಡುಗಳು ತಗುಲಿವೆ. ಇದನ್ನೂ ಓದಿ : ಸಿಎಂ ಕ್ಷೇತ್ರ ಶಿಗ್ಗಾಂವಿಯಲ್ಲಿ ಗುಂಡಿನ ಸದ್ದು – KGF2 ವೀಕ್ಷಣೆ ವೇಳೆ ಭಯಾನಕ ಘಟನೆ

ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ ದುಷ್ಕರ್ಮಿಗಳು ಹಳೆಯ ವೈಷಮ್ಯದಿಂದ ಹತ್ಯೆ ಮಾಡಿರಬಹುದು. ಅವರ ಪತ್ತೆಗೆ ಜಾಲ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು, ತಮ್ಮ ಕ್ಷೇತ್ರದ ಹಳ್ಳಿಯೊಂದಕ್ಕೆ ಕಳೆದ ತಿಂಗಳು ಭೇಟಿ ನೀಡಿದ್ದ ರಂಜಿತಾ (Ranjeeta Koli) ಅವರ ಮೇಲೆ ಮರಳು ಮಾಫಿಯಾದವರು ಹಲ್ಲೆಗೆ ಯತ್ನಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಇದನ್ನೂ ಓದಿ : ಉಗ್ರರೆಂದು ತಪ್ಪಾಗಿ ಭಾವಿಸಿ ಸೈನಿಕರಿಂದ ಗುಂಡಿನ ದಾಳಿ – 13 ನಾಗರಿಕರ ಹತ್ಯೆ, ಸೇನಾ ತನಿಖೆಗೆ ಆದೇಶ

LEAVE A REPLY

Please enter your comment!
Please enter your name here